ಲೂಧಿಯಾನಾ: ಶಿವಸೇನಾ ಪಂಜಾಬ್ ನಾಯಕ ಸಂದೀಪ್ ಥಾಪರ್ ಗೋರಾ ಅವರ ಮೇಲೆ ಲೂಧಿಯಾನದಲ್ಲಿ ನಿಹಾಂಗ್ ಸಿಖ್ ವೇಷಧಾರಿ ಇಬ್ಬರು ವ್ಯಕ್ತಿಗಳು ಕತ್ತಿಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಸಂದೀಪ್ ಥಾಪರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹುತಾತ್ಮ ಯೋಧ ಸುಖದೇವ್ ಥಾಪರ್ ಅವರ ವಂಶಸ್ಥರೂ ಆಗಿರುವ ಸಂದೀಪ್ ಥಾಪರ್ ಅವರು ಭಾಷಣ ಮಾಡಿದ ನಂತರ ಅವರು ದಾಳಿ ನಡೆಸಿದ್ದಾರೆ. ಪೂಜೆ ಸಲ್ಲಿಸಿ ಹೊರಬಂದ ಕೂಡಲೇ ನಿಹಾಂಗ್ ಸಿಖ್ ವೇಷ ಧರಿಸಿದ್ದ ಇಬ್ಬರು ಯುವಕರು ಆತನ ಗನ್ ಮ್ಯಾನ್ ಎದುರೇ ಹರಿತವಾದ ಆಯುಧಗಳು ಹಾಗೂ ಕತ್ತಿಗಳಿಂದ ಹಲ್ಲೆ ನಡೆಸಿದ್ದಾರೆ.
ದುಷ್ಕರ್ಮಿಗಳು ಜನನಿಬಿಡ ರಸ್ತೆಯಲ್ಲಿ ಅವರ ಸ್ಕೂಟರ್ ನಿಲ್ಲಿಸಿ ಕತ್ತಿಗಳಿಂದ ಹೊಡೆತಗಳ ಮಳೆಗರೆಯುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಥಾಪರ್ ಅವರ ಬಂದೂಕುಧಾರಿ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದಾರೆ.

