ತಿರುವನಂತಪುರಂ: ಕೇರಳದಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ನಮಾಜ್ ವಿಚಾರಗಳ ಭಾರೀ ಸದ್ದು ಮಾಡುತ್ತಿದೆ. ಇದೀಗ ಕಾಲೇಜಿನಲ್ಲಿ ನಮಾಜ್ ಮಾಡುವುದಕ್ಕೆ ಪ್ರತ್ಯೇಕ ಕೊಠಡಿ ಬೇಕೆಂದು ಪಟ್ಟುಹಿಡಿದಿದ್ದಾರೆ. ಕ್ಯಾಥೋಲಿಕ್ ಚರ್ಚ್ ನಡೆಸುತ್ತಿರುವ ಕಾಲೇಜಿನಲ್ಲಿ ನಾಮಜ್ ಮಾಡಲು ಮುಸ್ಲಿಮ್ ವಿದ್ಯರ್ಥಿಗಳ ಕೊಡಠಿಯ ಬೇಡಿಕೆಯನ್ನು ಆಡಳಿತಾಧಿಕಾರಿಗಳು ತಿರಸ್ಕರಿಸಿರುವುದು ಭಾರೀ ವಿವಾದ ಸೃಷ್ಟಿಸಿದೆ.
ಶುಕ್ರವಾರದಂದು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಗುಂಪು ಮುವಾಟ್ಟುಪುಳದ ನಿರ್ಮಲಾ ಕಾಲೇಜಿನ ಅಧಿಕಾರಿಗಳಿಗೆ ಪ್ರಾರ್ಥನೆ ಸಲ್ಲಿಸಲು ಕೊಠಡಿಯನ್ನು ನೀಡುವಂತೆ ಕೇಳಿದಾಗ ಸಮಸ್ಯೆ ಪ್ರಾರಂಭವಾಯಿತು. ಬೇಡಿಕೆ ಈಡೇರದಿದ್ದಾಗ ಇತರ ವಿದ್ಯಾರ್ಥಿಗಳೂ ಸೇರಿಕೊಂಡು ಕಾಲೇಜು ಪ್ರಾಂಶುಪಾಲರಾದ ಫಾದರ್ ಕನ್ನಡನ್ ಫ್ರಾನ್ಸಿಸ್‌ಗೆ ಘೇರಾವ್ ಹಾಕಿದ್ದಾರೆ.

