ಹೊಸ ದಿಲ್ಲಿ: ಲೇಖಕ, ಪತ್ರಕರ್ತ, ಬಿಜೆಪಿ ನಾಯಕ ಹಾಗೂ ಮಾಜಿ ರಾಜ್ಯಸಭಾ ಸಂಸದ ಬಲ್ಬೀರ್ ಪುಂಜ್ (76) ಶನಿವಾರ ನಿಧನರಾಗಿದ್ದಾರೆ.

ದಿ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದಲ್ಲಿ ಪತ್ರಕರ್ತರಾಗಿದ್ದ ಬಲ್ಬೀರ್ ಪುಂಜ್, ಸಾಮಾಜಿಕ ವಿದ್ಯಮಾನಗಳ ವಿಶ್ಲೇಷಕರೂ ಆಗಿದ್ದರು. ಅವರು ‘Tryst with Ayodhya: Decolonisation of India’ ಹಾಗೂ ‘Narrative ka Mayajaal’ ಕೃತಿಗಳನ್ನೂ ರಚಿಸಿದ್ದರು.

ಬಲ್ಬೀರ್ ಪುಂಜ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಅವರೊಬ್ಬ ಚಿಂತಕರು, ಲೇಖಕರು ಹಾಗೂ ಸಾರ್ವಜನಿಕ ಬುದ್ಧಿಜೀವಿಯಾಗಿದ್ದರು. ಅವರು ಪತ್ರಿಕೋದ್ಯಮ ಹಾಗೂ ಸಾರ್ವಜನಿಕ ಸೇವೆಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದರು ಎಂದು ಶ್ಲಾಘಿಸಿದ್ದಾರೆ.