ಭುವನೇಶ್ವರ: ಇತಿಹಾಸ ಪ್ರಸಿದ್ಧ ಹಿಂದೂ ದೇವಾಲಯ ಪುರಿ ಜಗನ್ನಾಥ ಮಂದಿರದಲ್ಲಿರುವ ರತ್ನ ಭಂಡಾರದ ರಹಸ್ಯ ಬಯಲಾಗುವ ಶುಭ ಕಾಲ ಬಂದಿದೆ. 46 ವರ್ಷದ ಬಳಿಕ ಒಡಿಶಾ ಸರ್ಕಾರ ರತ್ನ ಭಂಡಾರ ಇರುವ ಕೋಣೆಯ ಬಾಗಿಲನ್ನು ತೆರೆದಿದೆ. ದೇವಾಲಯ ಸಮಿತಿಯ 16 ಜನರ ವಿಶೇಷ ತಂಡದಿಂದ ರತ್ನ ಭಂಡಾರ ಕೋಣೆಯ ಶೋಧ ಕಾರ್ಯ ನಡೆಯುತ್ತಿದೆ.
ಪುರಿ ಜಗನ್ನಾಥ ದೇವಾಲಯದ ರತ್ನಭಂಡಾರದ ಕೊಠಡಿಯನ್ನ ಇದುವರೆಗೂ ಕೇವಲ 3 ಬಾರಿ ಅಷ್ಟೇ ಓಪನ್ ಮಾಡಲಾಗಿದೆ. 1803, 1926 ಮತ್ತು 1978ರಲ್ಲಿ ಮಾತ್ರ ರತ್ನ ಭಂಡಾರವನ್ನು ತೆರೆದು ಪರಿಶೀಲನೆ ನಡೆಸಲಾಗಿದೆ.
1979ರಲ್ಲಿ ರತ್ನ ಭಂಡಾರದ ಖಜಾನೆ ತೆರೆದಾಗ ಸಿಕ್ಕ ಒಡವೆಯನ್ನು ದಾಖಲಿಸಲಾಗಿದೆ. ಅಂದು ಜಗನ್ನಾಥನ ಖಜಾನೆಯಲ್ಲಿ 150 ಕೆಜಿ ಚಿನ್ನ ಇತ್ತು. ಚಿನ್ನದ ಆಭರಣಗಳು ಮತ್ತು ಚಿನ್ನವನ್ನೊಳಗೊಂಡ ಕಲ್ಲುಗಳು 1.50 ಲಕ್ಷ ಗ್ರಾಂ ಎನ್ನಲಾಗಿದೆ. ಬೆಳ್ಳಿ ಆಭರಣಗಳು ಮತ್ತು ಬೆಳ್ಳಿಯನ್ನೊಳಗೊಂಡ ಕಲ್ಲುಗಳು 2.50 ಲಕ್ಷ ಗ್ರಾಂ ಇದೆ ಎನ್ನಲಾಗಿದೆ.
ಪುರಿ ಜಗನ್ನಾಥ ದೇಗುಲದ ಇತಿಹಾಸ ತಿಳಿಸುವ ತಾಳೆಗರಿ ಪುಸ್ತಕದಲ್ಲಿ ರತ್ನಭಂಡಾರದಲ್ಲಿರುವ ಆಭರಣಗಳ ಬಗ್ಗೆ ಮಾಹಿತಿ ಇದೆ. ತಾಳೆಗರಿಯ 31ನೇ ಪುಟದಲ್ಲಿ ಮಂದಿರದ ನೆಲಮಾಳಿಗೆಯಲ್ಲಿ ನಿಧಿ ಇದೆ ಎಂದು ಉಲ್ಲೇಖ ಮಾಡಲಾಗಿದೆ.
ನೆಲಮಾಳಿಗೆಯಲ್ಲಿರುವ ಆ ಕೋಣೆಯ ಹೆಸರೇ ರತ್ನ ಭಂಡಾರ. ಈ ಭಂಡಾರಕ್ಕೆ 2 ಕೋಣೆಗಳಿವೆ. ಹೊರಕೋಣೆ ಮತ್ತು ಒಳಕೋಣೆ. ಹೊರಕೋಣೆಯಲ್ಲಿ ದೇವರಿಗೆ ದಿನನಿತ್ಯ ಬಳಸುವ ಆಭರಣಗಳನ್ನು ಜೋಪಾನವಾಗಿ ಇಡಲಾಗಿದೆ. ಇದರ ಕೀಲಿ ಕೈ ದೇವಸ್ಥಾನದ ಆಡಳಿತ ಮಂಡಳಿ ಕಚೇರಿಯಲ್ಲಿದೆ.
ಹೊರಕೋಣೆಯಲ್ಲಿ ಎರಡು ಭಾಗವಿದ್ದು, ಒಂದು ಕೋಣೆಯಲ್ಲಿ ದಿನನಿತ್ಯ ಬಳಸೋ ಆಭರಣಗಳಿವೆ. ಇನ್ನೊಂದರಲ್ಲಿ ವಿಶೇಷ ದಿನಗಳಲ್ಲಿ ಬಳಸುವ ಆಭರಣಗಳಿವೆ. ಒಳಕೋಣೆಯಲ್ಲಿ ಬಾಕಿ ಉಳಿದಿರುವ ಹೆಚ್ಚುವರಿ ಹಾಗೂ ಭಾರೀ ಪ್ರಮಾಣದ ಚಿನ್ನಾಭರಣಗಳನ್ನು ಒಳಕೊಠಡಿಯಲ್ಲಿ ಇಡಲಾಗಿದೆ. ಸದ್ಯಕ್ಕೆ ಇದರ ಕೀಲಿ ಕೈ ಕಣ್ಮರೆಯಾಗಿದೆ.
ಕೋಣೆ 01 ರಲ್ಲಿ ದೇವಸ್ಥಾನದಲ್ಲಿ ಬಳಸುವ ಆಭರಣಗಳು, ದೇವಸ್ಥಾನದಲ್ಲಿ ಬಳಸುವ ಚಿನ್ನ, ಬೆಳ್ಳಿಯ ಆಭರಣಗಳು ಲಭ್ಯವಿದೆ. ಕೋಣೆ 02 ರಲ್ಲಿ ಇದೀಗ ನಕಲಿ ಕೀ ಬಳಸಿ ಓಪನ್ ಮಾಡಿರೋದು ಇದೇ ಕೋಣೆಯನ್ನು, ಬಂಗಾರ, ಮುತ್ತು, ರತ್ನ, ಹವಳ, ಬೆಳ್ಳಿ ಸಾಮಾಗ್ರಿಗಳು, ರಾಜರು ದಾನವಾಗಿ ಕೊಟ್ಟಿರೋ ಅಪಾರವಾದ ವಜ್ರ-ವೈಢೂರ್ಯಗಳಿವೆ. 1979ರಲ್ಲಿ ಬರೋಬ್ಬರಿ 70 ದಿನಗಳ ಕಾಲ ಸಂಪತ್ತಿನ ಮೌಲ್ಯ ಲೆಕ್ಕಾಚಾರ,
ಇನ್ನೂ ರಹಸ್ಯವಾಗಿಯೋ ಉಳಿದಿರೋ ದೇಗುಲದ 3ನೇ ಕೋಣೆ, ಈ ಮೂರನೇ ರತ್ನಭಂಡಾರ ಕೋಣೆಗಿದೆ ‘ನಾಗಬಂಧ’ ರಕ್ಷಣೆ, ಇದೇ ಕೊಠಡಿಯಿಂದ ಹಿಂದೆ ಹಾವು ಬುಸುಗುಡುವ ಶಬ್ಧ ಕೇಳಿತ್ತಂತೆ, ಈ ಕೋಣೆಯಿಂದ ಸುರಂಗ ಮಾರ್ಗವೂ ಇದೆ ಎಂಬ ನಂಬಿಕೆ ಇದೆ. ಇದುವರೆಗೂ ಯಾರ ಪ್ರವೇಶಕ್ಕೂ ಸಾಧ್ಯವಾಗದ ನಿಗೂಢ ಕೊಠಡಿಯಾಗಿದೆ.

