ನವದೆಹಲಿ: ಬುಲ್ಡೋಜರ್ ನ್ಯಾಯ ಎಂದು ಕರೆಯಲ್ಪಡುವ ಕ್ರಮದ ವಿರುದ್ಧ ಸುಪ್ರೀಂಕೋರ್ಟ್ ಇಂದು ಗರಂ ಆಗಿದ್ದು, ಅಪರಾಧದ ಆರೋಪ ಹೊತ್ತಿರುವ ವ್ಯಕ್ತಿಗೆ ಸೇರಿದ ಆಸ್ತಿಗಳನ್ನು ಕೆಡವಲು ಸಾಧ್ಯವಿಲ್ಲ ಎಂದು ಹೇಳಿದೆ.
ಗಂಭೀರ ಅಪರಾಧಗಳ ಆರೋಪಿಗಳ ಮನೆಗಳ ವಿರುದ್ಧ ಅಧಿಕಾರಿಗಳು ಆಗಾಗ್ಗೆ ಕೈಗೊಳ್ಳುವ ಬುಲ್ಡೋಜರ್ ಕ್ರಮದ ವಿರುದ್ಧದ ಮನವಿಗಳನ್ನು ಆಲಿಸಿದ ಆಲಿಸಿದ ನ್ಯಾಯಾಲಯ, ವ್ಯಕ್ತಿಯನ್ನು ಅಪರಾಧಿಯೆಂದು ನಿರ್ಣಯಿಸಿದರೂ ಆಸ್ತಿಯನ್ನು ಕೆಡವಲು ಸಾಧ್ಯವಿಲ್ಲ ಎಂದು ಹೇಳಿದೆ.
ಆದಾಗ್ಯೂ, ಸಾರ್ವಜನಿಕ ರಸ್ತೆಗಳಿಗೆ ಅಡ್ಡಿಪಡಿಸುವ ಯಾವುದೇ ಅಕ್ರಮ ರಚನೆಯನ್ನು ರಕ್ಷಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಒಬ್ಬ ಆರೋಪಿ ಎಂಬ ಮಾತ್ರಕ್ಕೆ ನೀವು ಅವರ ಮನೆಯನ್ನು ಕೆಡವುತ್ತೀರ ಎಂದು ಎಂದು ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಪ್ರಶ್ನಿಸಿದೆ. ‘ಈ ವಿಷಯದ ಬಗ್ಗೆ ಮಾರ್ಗಸೂಚಿಗಳನ್ನು ನೀಡಲು ಪ್ರಸ್ತಾಪಿಸಲಾಗಿದೆ ಎಂದು ಕೋರ್ಟ್ ಹೇಳಿದೆ.
‘ಅವರು ಅಪರಾಧಿಯಾಗಿದ್ದರೂ ಸಹ, ಕಾನೂನಿನಿಂದ ಸೂಚಿಸಲಾದ ಕಾರ್ಯವಿಧಾನವನ್ನು ಅನುಸರಿಸದೆ ಅದನ್ನು ಮಾಡಲಾಗುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರ ಪೀಠವು ಕೆಡವುವಿಕೆ ಕ್ರಮದ ವಿರುದ್ಧದ ಅರ್ಜಿಗಳ ವಿಚಾರಣೆ ವೇಳೆ ಹೇಳಿದೆ.
‘ನಾವು ಪ್ಯಾನ್-ಇಂಡಿಯಾ ಆಧಾರದ ಮೇಲೆ ಕೆಲವು ಮಾರ್ಗಸೂಚಿಗಳನ್ನು ಹಾಕಲು ಪ್ರಸ್ತಾಪಿಸುತ್ತೇವೆ, ಇದರಿಂದಾಗಿ ಎದ್ದಿರುವ ಸಮಸ್ಯೆಗಳ ಬಗ್ಗೆ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ’ ಎಂದು ಪೀಠವು ತಿಳಿಸಿದೆ. ಒಬ್ಬರ ಮಗ ದಂಗೆಕೋರ ಆಗಿರಬಹುದು, ಆತನ ತಂದೆಯ ಮನೆ ಕೆಡವಿದರೆ ಇದು ದಾರಿಯಲ್ಲ’ ಎಂದು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರು ತಿಳಿದ್ದಾರೆ.

