ನವದೆಹಲಿ: ಸಮೋಸಾ ಮತ್ತು ಪಕೋಡಾ ಮಾರಾಟ ಮಾಡುವ 18 ವರ್ಷದ ಸನ್ನಿ ಕುಮಾರ್ NEET UG ಪರೀಕ್ಷೆಯಲ್ಲಿ 720ಕ್ಕೆ 664 ಅಂಕಗಳನ್ನು ಗಳಿಸಿ ವೈದ್ಯನಾಗುವ‌ ಬಹಳ ವರ್ಷಗಳ ಕಾಲದ ಕುಮಾರ್ ಕನಸೀಗ ನನಸಾಗಿದೆ.

ಕುಮಾರ್ ದುಡಿದು ತನ್ನ ಕುಟುಂಬ ನೋಡಿಕೊಳ್ಳುತ್ತಿದ್ದನು. ಆತ ಶಾಲೆ ಮುಗಿಸಿದ ನಂತರ ಸಂಜೆ 4 ಗಂಟೆಗೆ ಅಂಗಡಿ ಓಪನ್‌ ಮಾಡಿ ನೋಯ್ಡಾ ಸೆಕ್ಟರ್ 12 ರಲ್ಲಿ ಸಮೋಸವನ್ನು ಮಾರಾಟ ಮಾಡುತ್ತಿದ್ದನು. ರಾತ್ರಿ 9ಗಂಟೆಗೆ ಅಂಗಡಿ ಬಾಗಿಲು ಹಾಕುತ್ತಿದ್ದನು.

ನನ್ನ ತಂದೆ ಕುಟುಂಬ ನೋಡಿಕೊಳ್ಳುತ್ತಿರಲಿಲ್ಲ. ಆದ್ದರಿಂದ ಎಲ್ಲಾ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳಬೇಕಾಗಿದೆ. ನನಗೆ ತಾಯಿ ಅಪಾರವಾದ ಪ್ರೀತಿ ಮತ್ತು ಬೆಂಬಲ ನೀಡಿದ್ದಾರೆ. ಹಾಗಾಗಿ ನಾನು ಇಷ್ಟೊಂದು ಸಾಧಿಸಿದ್ದೇನೆ ಎಂದು ಕುಮಾರ್‌ ಹೇಳಿದ್ದಾರೆ.