ಕೇರಳ : ಶಬರಿಮಲೆ ವಿಚಾರದಲ್ಲಿ ಕೇರಳ ಹೈಕೋರ್ಟ್ ಸಂಪೂರ್ಣ ನಿಗಾ ಇದ್ದರೂ ಕೂಡ ದೇವಸ್ವಂ ಮಂಡಳಿ ಒಂದಲ್ಲಾ ಒಂದು ಎಡವಟ್ಟನ್ನು ಮಾಡುತ್ತಲೆ ಇದ್ದು, ಪ್ರತಿಭಾರಿಯೂ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ.

ಈ ಬಾರಿ ಹೈಕೋರ್ಟ್ ಗೆ ಮಾಹಿತಿ ನೀಡದೆ. ಶಬರಿಮಲೆಯ ಚಿನ್ನವನ್ನು ಪಾಲಿಶ್ ಮಾಡಲು ಕೊಟ್ಟು, ಇದೀಗ ವಾಪಾಸ್ ಬಂದ ಚಿನ್ನದಲ್ಲಿ ಸುಮಾರು 4.5 ಕೆಜಿ ಕಡಿಮೆಯಾಗಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಭದ್ರತಾ ಅಧಿಕಾರಿಗಳಿಗೆ ಕೇರಳ ಹೈಕೋರ್ಟ್‌ ನಿರ್ದೇಶನ ನೀಡಿದೆ.

2019ರಲ್ಲಿ ಮೂರ್ತಿಗಳಿಂದ ಚಿನ್ನ ಲೇಪಿತ ಕವಚವನ್ನು ಮೂರ್ತಿಯಿಂದ ಬೇರ್ಪಡಿಸಿ ಹೊಸದಾಗಿ ಚಿನ್ನ ಲೇಪನಕ್ಕೆಂದು ಚೆನ್ನೈನ ಕಂಪನಿಯೊಂದಿಗೆ ನೀಡಲಾಗಿತ್ತು. ಈ ವೇಳೆ ಚಿನ್ನದ ತೂಕವು 42.8 ಕೆ.ಜಿ ಇತ್ತು. ಕವಚ ತೆಗೆದಿಟ್ಟ ಸುಮಾರು ಒಂದು ತಿಂಗಳು 9 ದಿನಗಳ ಬಳಿಕ ಕಂಪನಿಗೆ ನೀಡಲಾಗಿತ್ತು. ಈ ಹೊತ್ತಿಗೆ ಚಿನ್ನದ ತೂಕವು 38.24 ಕೆ.ಜಿ.ಯಷ್ಟಾಗಿದೆ’ ಎಂದು ನ್ಯಾಯಾಲಯ ಬುಧವಾರ ಗುರುತಿಸಿದೆ.

ನ್ಯಾಯಾಲಯದ ಈ ನಿರ್ದೇಶನದಿಂದ ಮಂಡಳಿಗೆ ತೀವ್ರ ಮುಜುಗರ ಉಂಟಾಗಿದೆ. ಚಿನ್ನದ ತೂಕ ಕಡಿಮೆ ಆಗಿರುವ ಬಗ್ಗೆ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುತ್ತಿದೆ. ‘ಚಿನ್ನದ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದ್ದನ್ನು ದೇವಸ್ಥಾನದ ಮಂಡಳಿಯು ದಾಖಲು ಮಾಡಿಲ್ಲ’ ಎಂದೂ ಕೋರ್ಟ್‌ ಹೇಳಿದೆ.

ಈ ವೇಳೆ ಹೈಕೋರ್ಟ್ ಪೆಟ್ರೋಲ್ ಆಗಿದ್ದರೆ, ತೂಕ ಇಳಿಕೆ ಅರ್ಥವಾಗುವಂತಹದ್ದಾಗಿದೆ, ಆದರೆ ಅದು ಚಿನ್ನವಾಗಿರುವುದರಿಂದ, ಅದು ಹೇಗೆ ತೂಕ ಇಳಿಕೆಯಾಗಲು ಸಾಧ್ಯ?” ಎಂದು ಪೀಠವು ಟೀಕಿಸಿದೆ. ದೇವಸ್ವಂ ವಿಜಿಲೆನ್ಸ್‌ನಿಂದ ತನಿಖೆಗೆ ಆದೇಶಿಸಿತು, ಸೆಪ್ಟೆಂಬರ್ 30, 2025 ರೊಳಗೆ ಸಮಗ್ರ ವರದಿಯನ್ನು ನಿರೀಕ್ಷಿಸಲಾಗಿದೆ.