ದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು ಶನಿವಾರರಂದು ಶತಮಾನೋತ್ಸವ ವರ್ಷಕ್ಕೆ ಕಾಲಿಟ್ಟಿರುವುದಕ್ಕೆ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಷಣವನ್ನು “ಕೇಳಲೇಬೇಕು” ಎಂದು ಭಾಷಣದ ಲಿಂಕ್ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ, ಅಂದರೆ ರಾಷ್ಟ್ರ ಸೇವೆಗೆ ಮುಡಿಪಾಗಿಟ್ಟ ಆರ್‌ಎಸ್‌ಎಸ್ ಇಂದು 100ನೇ ವರ್ಷಕ್ಕೆ ಕಾಲಿಡುತ್ತಿದೆ. ತಮ್ಮ ಅವಿರತ ಪಯಣದ ಈ ಐತಿಹಾಸಿಕ ಮೈಲಿಗಲ್ಲಿನ ಎಲ್ಲಾ ಸ್ವಯಂಸೇವಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಅನಂತ ಶುಭಾಶಯಗಳು. ಮಾ ಭಾರತಿಯ ಈ ಸಂಕಲ್ಪ ಮತ್ತು ಸಮರ್ಪಣೆ ದೇಶದ ಪ್ರತಿ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಮತ್ತು ‘ಅಭಿವೃದ್ಧಿ ಹೊಂದಿದ ಭಾರತ’ವನ್ನು ಸಾಕಾರಗೊಳಿಸುವಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ” ಎಂದು ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖ್ಯಸ್ಥ ಮೋಹನ್ ಭಾಗವತ್ ಅವರು ಶನಿವಾರ ‘ಧರ್ಮ’ ಭಾರತದ ಸಾರವನ್ನು ಪ್ರತಿನಿಧಿಸುತ್ತದೆಯೇ ಹೊರತು ಧರ್ಮವನ್ನಲ್ಲ ಎಂದು ಹೇಳಿದ್ದಾರೆ. ನಾಗ್ಪುರದ ಆರೆಸ್ಸೆಸ್ ಪ್ರಧಾನ ಕಚೇರಿಯಲ್ಲಿ ವಿಜಯ ದಶಮಿ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅನೇಕ ಧರ್ಮಗಳಿದ್ದರೂ, ಅವುಗಳನ್ನು ಸಂಪರ್ಕಿಸುವ ಆಧಾರವಾಗಿರುವ ಆಧ್ಯಾತ್ಮಿಕತೆಯು ‘ಧರ್ಮ’ವನ್ನು ವ್ಯಾಖ್ಯಾನಿಸುತ್ತದೆ ಎಂದಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥರು ಬಾಂಗ್ಲಾದೇಶದಲ್ಲಿ “ದಬ್ಬಾಳಿಕೆಯ ಮೂಲಭೂತವಾದಿ ಸ್ವಭಾವ” ಅಸ್ತಿತ್ವದಲ್ಲಿದೆ. ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ತಲೆಯ ಮೇಲೆ ಅಪಾಯದ ಕತ್ತಿ ನೇತಾಡುತ್ತಿದೆ. ಬಾಂಗ್ಲಾದೇಶದಲ್ಲಿ ಏನಾಯಿತು? ಗಲಭೆಯಿಂದಾಗಿ ಅಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿ ಮಾಡಲಾಯಿತು, ಹಿಂದೂಗಳು ಕಿರುಕುಳಕ್ಕೊಳಗಾದರು, ಹಿಂದೂಗಳು ತಮ್ಮನ್ನು ರಕ್ಷಿಸಿಕೊಳ್ಳಲು ಬೀದಿಗೆ ಬಂದರು. ಆದ್ದರಿಂದ ಸ್ವಲ್ಪ ರಕ್ಷಣೆ ಇತ್ತು. ಮೂಲಭೂತವಾದಿಗಳು ಇರುವವರೆಗೂ ಅಲ್ಪಸಂಖ್ಯಾತರು ಶೋಷಣೆಗೆ ಒಳಗಾಗುತ್ತಾರೆ ಎಂದು ಹೇಳಿದ್ದಾರೆ.
“ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದಿರುವುದು ನಾಚಿಕೆಗೇಡಿನ ಸಂಗತಿ. ಆದರೆ ಇದು ಒಂದೇ ಒಂದು ಘಟನೆಯಲ್ಲ.. ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಆ ಘಟನೆಯ ನಂತರವೂ, ವಿಷಯಗಳು ವಿಳಂಬವಾದ ರೀತಿ ಮತ್ತು ಅಪರಾಧಿಗಳನ್ನು ರಕ್ಷಿಸಿದ ರೀತಿ ಅಪರಾಧ ಮತ್ತು ರಾಜಕೀಯದ ನಡುವಿನ ಮೈತ್ರಿಯ ಪರಿಣಾಮವಾಗಿದೆ ಎಂದು ಅವರು ಹೇಳಿದ್ದಾರೆ.

