ಆಂಧ್ರಪ್ರದೇಶ: ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಹತ್ತಾರು ಸಾವು – ನೋವುಗಳಿಂದ ತತ್ತರಿಸಿರುವ ಆಂಧ್ರ ಪ್ರದೇಶ – ತೆಲಂಗಾಣದ ನೆರವಿಗೆ ಸೆಲೆಬ್ರಿಟಿಗಳು ಕೈಜೋಡಿಸಿದ್ದಾರೆ.
ಕಳೆದ ತಿಂಗಳಿಂದ ಆಂಧ್ರ ಪ್ರದೇಶ – ತೆಲಂಗಾಣದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಪರಿಣಾಮ ಹಲವೆಡೆ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದ ಅಲ್ಲಿಯ ಜನ ತತ್ತರಿಸಿ ಹೋಗಿದ್ದು ಮನೆ-ಮಟ ಇಲ್ಲದೆ ಕಂಗಾಲಾಗಿದ್ದಾರೆ. ಇನ್ನು ಮನೆ ಹಾಗೂ ತನ್ನವರನ್ನು ಕಳೆದುಕೊಂಡಿರುವ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಹಲವು ಗಣ್ಯರು ಹಣಕಾಸಿನ ಸಹಾಯವನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ.
రెండు తెలుగు రాష్ట్రాల్లో ఇటీవల కురిసిన భారీ వర్షాల వల్ల జరుగుతున్న వరద భీభత్సం నన్ను ఎంతగానో కలచివేసింది. అతిత్వరగా ఈ విపత్తు నుండి తెలుగు ప్రజలు కోలుకోవాలని నేను ఆ దేవుడిని ప్రార్థిస్తున్నాను.
వరద విపత్తు నుండి ఉపశమనం కోసం రెండు తెలుగు రాష్ట్రాల ప్రభుత్వాలు తీసుకొనే చర్యలకి…
— Jr NTR (@tarak9999) September 3, 2024
“ಇತ್ತೀಚೆಗೆ ಎರಡು ತೆಲುಗು ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಪ್ರವಾಹದಿಂದ ನಾನು ತೀವ್ರವಾಗಿ ನೊಂದಿದ್ದೇನೆ. ತೆಲುಗು ಜನರು ಈ ವಿಪತ್ತಿನಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಕಡೆಯಿಂದ ನಾನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 50 ಲಕ್ಷ ರೂ.ಪರಿಹಾರವನ್ನು ನೀಡುತ್ತಿದ್ದೇನೆ” ಎಂದು ನಟ ಜೂ.ಎನ್ ಟಿಆರ್(Actor Jr NTR) ಅವರು ʼಎಕ್ಸ್ʼ ಖಾತೆಯಲ್ಲಿ ಬರೆದಿದ್ದಾರೆ.
ಇತ್ತ ‘ಕಲ್ಕಿ 2898 ಎ.ಡಿʼ ಸಿನಿಮಾದ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ 25 ಲಕ್ಷ ರೂ. ಪರಿಹಾರವನ್ನು ಪ್ರವಾಹ ಪೀಡಿತ ರಾಜ್ಯಕ್ಕೆ ನೀಡಿರುವುದಾಗಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿನ ಪೋಸ್ಟ್ ಮೂಲಕ ಹೇಳಿದೆ.
ಪ್ರವಾಹದಿಂದಾಗಿ ಇದುವರೆಗೆ ಕನಿಷ್ಠ 19 ಜನರು ಸಾವನ್ನಪ್ಪಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿವಿಧ ಭಾಗಗಳಿಂದ 17,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

