ಮುಂಬೈ:  13 ವರ್ಷದ ಅಪ್ರಾಪ್ತ ಬಾಲಕನೊಬ್ಬನಿಗೆ ಆಟೋ ಚಾಲಕ ಲೈಂಗಿಕ ಕಿರುಕುಳ ನೀಡಿದ ಘಟನೆ ಮಹಾರಾಷ್ಟ್ರದ ನವೀ ಮುಂಬೈನಲ್ಲಿ ನಡೆದಿದೆ. ಆತನ ವಿರುದ್ಧ ಮಹಾರಾಷ್ಟ್ರದ ನವೀ ಮುಂಬೈನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುಂಬೈನ ಮುಲುಂಡ್ ನಲ್ಲಿ ವಾಸಿಸುವ 9 ನೇ ತರಗತಿ ವಿದ್ಯಾರ್ಥಿ ತನ್ನ ಸ್ವೀಮಿಂಗ್ ಕ್ಲಾಸ್‍ಗೆ ಹಾಜರಾಗಲು ಕಲ್ವಾಗೆ ಭೇಟಿ ನೀಡಿದ್ದನು. ನಂತರ ರಾತ್ರಿ 9.45 ರ ಸುಮಾರಿಗೆ ಆಟೋರಿಕ್ಷಾದಲ್ಲಿ ಒಬ್ಬಂಟಿಯಾಗಿ ಮನೆಗೆ ಹಿಂದಿರುಗುತ್ತಿದ್ದಾಗ, ಆಟೋ ಚಾಲಕ ವಿಟಾವಾ ಪೆಟ್ರೋಲ್ ಪಂಪ್ ಬಳಿ ವಾಹನವನ್ನು ನಿಲ್ಲಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅವನ ಈ ದುಷ್ಕೃತ್ಯ ಹುಡುಗನಿಗೆ ಆಘಾತವನ್ನುಂಟುಮಾಡಿದೆ. ನಂತರ ಅವನು ಅದರ ಬಗ್ಗೆ ತನ್ನ ಹೆತ್ತವರಿಗೆ ತಿಳಿಸಿದ್ದಾನೆ. ನಂತರ ಅವರೆಲ್ಲರೂ ಪೊಲೀಸರನ್ನು ಸಂಪರ್ಕಿಸಿ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರದ ನವೀ ಮುಂಬೈನ ಪೊಲೀಸರು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದು, ಚಾಲಕನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.