ಕೋಲ್ಕತ್ತ: ವೈದ್ಯ ವಿದ್ಯಾರ್ಥಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆಪ್ರಮುಖ ಆರೋಪಿ ಸಂಜಯ್ ರಾಯ್ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಡಿಎನ್‌ಎ ವರದಿ, ರಕ್ತದ ಕಲೆ ಸೇರಿದಂತೆ 11 ಸಾಕ್ಷ್ಯಗಳನ್ನು ಪಟ್ಟಿ ಮಾಡಿದೆ.
ಸಂತ್ರಸ್ತೆಯ ದೇಹದಲ್ಲಿ ಆರೋಪಿಯ ಡಿಎನ್‌ಎ ಪತ್ತೆ, ಕೃತ್ಯ ನಡೆದ ಸ್ಥಳದಲ್ಲಿ ಆರೋಪಿಯ ಕೂದಲು ಪತ್ತೆ, ಸಂತ್ರಸ್ತೆಯ ರಕ್ತದ ಕಲೆಗಳು ಆರೋಪಿಯ ಬಟ್ಟೆಯಲ್ಲಿ ಪತ್ತೆ, ಆರೋಪಿಯ ದೇಹದ ಮೇಲೆ ಗಾಯ, ಸಿಸಿಟಿವಿ ದ್ಯಶ್ಯಾವಳಿಗಳು ಮತ್ತು ಮೊಬೈಲ್ ಫೋನ್ ಲೊಕೇಷನ್, ಕರೆಗಳ ವಿವರಗಳನ್ನು ಸಾಕ್ಷ್ಯವಾಗಿ ಸಲ್ಲಿಸಲಾಗಿದೆ.

