ಮುಂಬೈ: ದೇಶದ ಹೆಮ್ಮೆಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಗಲಿಕೆಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ಇದೀಗ ಸೂರತ್‌ನ ವ್ಯಾಪಾರಿಯೊಬ್ಬರು 11ಸಾವಿರ ವಜ್ರಗಳನ್ನು ಬಳಸಿ ರತನ್ ಟಾಟಾ ಅವರ ಭಾವಚಿತ್ರ ಬಿಡಿಸಿದ್ದಾರೆ.
ಸೂರತ್‌ನ ಉದ್ಯಮಿಯೊಬ್ಬರು 11 ಸಾವಿರ ವಜ್ರಗಳನ್ನು ಬಳಸಿ ರತನ್ ಟಾಟಾ ಅವರ ಚಿತ್ರವನ್ನು ಬಿಡಿಸಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಮೂಲಕ ರತನ್ ಟಾಟಾಗೆ ಗೌರವ ಸಲ್ಲಿಸಿದ್ದಾರೆ. ವಿಡಿಯೋಗೆ ನೆಟ್ಟಿಗರು ಆನಂದ ಬಾಷ್ಪ ಸುರಿಸಿದ್ದಾರೆ.

