ನವದೆಹಲಿ: ವಿವಾದಿತ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಅತ್ಯಾಚಾರ ಮತ್ತು ಕೊಲೆಯ ಅನ್ಯಾಯ ಅಲ್ಲ ಎಂದು ಹೇಳುವ ಮೂಲಕ ಮತ್ತೆ ವಿವಾದವನ್ನು ಸೃಷ್ಠಿಸಿದ್ದಾರೆ.
ಝಾಕಿರ್ ನಾಯ್ಕ್ ಅವರ ಎರಡು ನಿಮಿಷದ ವಿಡಿಯೋ ಭಾರೀ ವೈರಲ್ ಆಗಿದೆ. ಈ ಹೇಳಿಕೆ ಯಾವಾಗ ನೀಡಿದ್ದು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ವಿಡಿಯೋದಲ್ಲಿ ಝಾಕಿರ್, ಮಹಿಳೆಯರ ಮೇಲೆ ಅತ್ಯಾಚಾರ ಎಸಗುವುದು ಹಾಗೂ ಕೊಲೆ ಮಾಡುವುದು ಅನ್ಯಾಯ ಅಲ್ಲ. ಅಪರಾಧಿ ನಿಜಕ್ಕೂ ಪಶ್ಚಾತ್ತಾಪಪಟ್ಟರೆ ಅಲ್ಲಾಹನಿಂದ ಕ್ಷಮೆ ಸಿಗುತ್ತದೆ ಎಂದಿದ್ದಾರೆ.
ಮಹಿಳೆಯರು ಪ್ರಚೋದನಕಾರಿ ಉಡುಪು ಧರಿಸಿದರೆ ಅತ್ಯಾಚಾರ ಹಾಗೂ ಕೊಲೆಗೆ ಅವರೇ ಜವಾಬ್ದಾರರಾಗುತ್ತಾರೆ. ಇದು ಅನ್ಯಾಯ ಅಲ್ಲ. ಮಹಿಳೆಯರು ಕಡಿಮೆ ಬಟ್ಟೆ ಧರಿಸುವುದರಿಂದ ಪುರುಷರು ಉದ್ರೇಕಗೊಳ್ಳುತ್ತಾರೆ ಹಾಗೂ ಅತ್ಯಾಚಾರ ಎಸಗುತ್ತಾರೆ. ಹೀಗಾಗಿ ಮಹಿಳೆಯರು ಮುಖ ಮಾತ್ರ ಕಾಣುವ ಹಾಗೂ ಪೂರ್ತಿ ದೇಹವನ್ನು ಮುಚ್ಚುವ ಬಟ್ಟೆಯನ್ನು ಧರಿಸಬೇಕು ಎಂದಿದ್ದಾರೆ. ಝಾಕಿರ್ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

