ಉತ್ತರ ಪ್ರದೇಶ: ನಗರದ ಮೊರಾದಾಬಾದ್ನಲ್ಲಿ ನರ್ಸ್ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಆಕೆಯನ್ನು ಬಲವಂತಾಗಿ ಇಬ್ಬರ ಸಹಾಯದಿಂದ ಅತ್ಯಾಚಾರ ವೆಸಗಿದ್ದ ವೈದ್ಯನನ್ನು ಇದೀಗ ಸೆರೆ ಮನೆಗೆ ತಳ್ಳಿದ್ದಾರೆ.
ಜತೆಗೆ ಆಸ್ಪತ್ರೆಗೂ ಬೀಗ ಹಾಕಲಾಗಿದೆ. ಆಕೆ ಕಳೆದ 10 ತಿಂಗಳಿನಿಂದ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು, ಶನಿವಾರ ರಾತ್ರಿ ವೈದ್ಯರ ಪತ್ನಿ ಮನೆಯಲ್ಲಿರಲಿಲ್ಲ, ಆಕೆಯನ್ನು ಮಲಗುವ ಕೋಣೆಗೆ ಕರೆದಿದ್ದರು ಆಕೆ ನಿರಾಕರಿಸಿದಾಗ ಆತನ ಸಹಚರರು ಆಕೆಯನ್ನು ಬಲವಂತವಾಗಿ ರೂಮಿಗೆ ತಳ್ಳಿ ಬಾಗಿಲು ಹಾಕಿದ್ದರು. ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು.
ನರ್ಸ್ ತಂದೆಯ ದೂರಿನ ಮೇರೆಗೆ ಪೊಲೀಸರು ಅತ್ಯಾಚಾರ ಮತ್ತು ಎಸ್‌ಸಿ ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನರ್ಸ್ನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

