ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಹುಸೈನಿ ಗ್ರಾಮದಲ್ಲಿ, ರಾಸಾಯನಿಕಗಳನ್ನು ಬಳಸಿ ಕಲಬೆರಕೆ ಪನೀರ್ ತಯಾರಿಸುತ್ತಿದ್ದ ಅಕ್ರಮ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ವೇಳೆ 500 ಕೆಜಿ ಕಲುಷಿತ ಪನೀರ್ ಮತ್ತು 2,000 ಲೀಟರ್ ಹಾಲನ್ನು ನಾಶಪಡಿಸಲಾಗಿದೆ. ಪರೀಕ್ಷೆಗಾಗಿ 9 ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

