ನವದೆಹಲಿ: ಕಾಂಗ್ರೆಸ್‌ ಸಂಸದ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮದ್ಯ ಅಥವಾ ಮಾದಕವಸ್ತು ಸೇವಿಸಿ ಸಂಸತ್ತಿಗೆ ಬರುತ್ತಾರೆ. ಅವರನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಹಿಮಾಚಲ ಪ್ರದೇಶದ ಸಂಸದೆ, ನಟಿ ಕಂಗನಾ ರನೌತ್‌ ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರು ‘ದೇಶವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ’ ಎಂದು ಆರೋಪಿಸಿ ಲೋಕಸಭೆಯಲ್ಲಿ ಇತ್ತೀಚೆಗೆ ಮಾಡಿದ್ದ ಭಾಷಣದ ಬಗ್ಗೆ ಕಂಗನಾ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಪ್ರಧಾನಿಯವರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದಾರೆ. ಇಡೀ ದೇಶ ಪ್ರಧಾನಿ ಅವರನ್ನು ಆಯ್ಕೆ ಮಾಡಿದೆ. ಹಾಗಿದ್ದಾಗ, ರಾಹುಲ್‌ ಗಾಂಧಿಯವರು ಪ್ರಜಾಪ್ರಭುತ್ವವನ್ನು ಗೌರವಿಸುವುದಿಲ್ಲವೇ? ಪ್ರಧಾನ ಮಂತ್ರಿಯನ್ನು ಲಿಂಗ, ವಯಸ್ಸು, ಸಾಮಾಜಿಕ ಸ್ಥಾನಮಾನ ಅಥವಾ ಜಾತಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆಯೇ? ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಅವರು (ರಾಹುಲ್ ಗಾಂಧಿ) ಸಂವಿಧಾನವನ್ನು ನಿರಂತರವಾಗಿ ಅವಮಾನಿಸಿದ್ದಾರೆ. ಮುಂದೊಂದು ದಿನ ಅವರು ಪ್ರಧಾನಿಯನ್ನು ಚರ್ಮದ ಬಣ್ಣದ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ ಎಂದೂ ಹೇಳಬಹುದು’ ಎಂದು ಕಿಡಿಕಾರಿದ್ದಾರೆ.

‘ನಾನು ನೂತನ ಸದಸ್ಯೆಯೇ ಇರಬಹುದು. ಆದರೆ, ಅವರು ಸಂಸತ್ತಿಗೆ ಬರುವ ಸ್ಥಿತಿ ಮತ್ತು ನೀಡುವ ಹೇಳಿಕೆಗಳನ್ನು ನೋಡಿ ಸಂಪೂರ್ಣವಾಗಿ ಆಘಾತಗೊಂಡಿದ್ದೇನೆ. ವ್ಯಕ್ತಿಯೊಬ್ಬರು ಸಂಸತ್ತಿನಲ್ಲಿ ಈಶ್ವರನ ಭಾರತ ಮತ್ತು ಚಕ್ರವ್ಯೂಹದ ಬಗ್ಗೆ ಮಾತನಾಡುತ್ತಾರೆ ಎಂದರೆ, ಆತನನ್ನು ಮಾದಕ ದ್ರವ್ಯ ಸೇವನೆ ಪರೀಕ್ಷೆಗೊಳಪಡಿಸಬೇಕು ಎನಿಸುವುದಿಲ್ಲವೇ? ಅವರು ಸಂಸತ್ತಿಗೆ ಮದ್ಯ ಸೇವಿಸಿ ಅಥವಾ ಮಾದಕ ದ್ರವ್ಯದ ಮತ್ತಿನಲ್ಲೇ ಬರುತ್ತಾರೆ. ಅದು ಉತ್ತಮ ನಡೆ ಎಂದು ನನಗನಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Parliament mein jo arguments sunte hain, lagta hai reality show audition chal raha hai.

Agar aise chala, toh poore parliament ka drug test karna padega!

Classroom ke students bhi zyada tameez se behave karte hain. Thoda… pic.twitter.com/lLTYXiZnlv

— Akassh Ashok Gupta (@peepoye_) July 31, 2024