ನವದೆಹಲಿ: ರಾಹುಲ್ ಗಾಂಧಿ ಎದುರಾಳಿ ಆಟಗಾರರನ್ನು ಸೋಲಿಸಲು ಮಾರ್ಷಲ್ ಆರ್ಟ್ಸ್ ಜಿಯು-ಜಿಟ್ಸು ತಂತ್ರವನ್ನು ಬಳಸುತ್ತಿದ್ದು, ಅವರು ಮಾರ್ಷಲ್ ಆರ್ಟ್ಸ್ ಟ್ರಿಕ್ಸ್ ಕಲಿಯುತ್ತಿರುವುದನ್ನು ಕಾಣಬಹುದು. ಇದರ ವೀಡಿಯೋವನ್ನು ರಾಹುಲ್​ ತಮ್ಮ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ಕ್ರೀಡಾಪಟುವಾಗಿ ಕಾಣಿಸಿಕೊಂಡು ಕ್ರೀಡಾ ದಿನದ ಶುಭಾಶಯ ತಿಳಿಸಿದ್ದಾರೆ. ಇನ್ನು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ, ಅವರು ಪ್ರತಿದಿನ ಜಿಯು-ಜಿಟ್ಸು ಅಭ್ಯಾಸ ಮಾಡುತ್ತಿದ್ದರು, ಇದರಲ್ಲಿ ಇನ್ನೂ ಅನೇಕ ಜನರು ಅವರೊಂದಿಗೆ ಸೇರುತ್ತಿದ್ದರು ಎಂದು ಅವರು ವೀಡಿಯೊದ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ. ಈಗ ಅವರು ‘ಭಾರತ್ ಡೋಜೊ ಯಾತ್ರೆ’ ಪ್ರಾರಂಭಿಸಲಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

— Rahul Gandhi (@RahulGandhi) August 29, 2024