ಪುರಿ: ಒಡಿಶಾದ ಪುರಿಯಲ್ಲಿರುವ ಹೆಸರಾಂತ, 12ನೇ ಶತಮಾನದ ಜಗನ್ನಾಥ ದೇಗುಲದ ‘ರತ್ನ ಭಂಡಾರ’ವನ್ನು ಜುಲೈ 18 ರಂದು (ಗುರುವಾರ) ಮತ್ತೆ ತೆರೆಯಲಾಗುವುದು ಎಂದು ಜಗನ್ನಾಥ ದೇವಾಲಯದ ಆಡಳಿತ ಮಂಡಳಿ (ಎಸ್‌ಜೆಟಿಎ) ತಿಳಿಸಿದೆ.
ಖಜಾನೆಯಲ್ಲಿರುವ ಆಭರಣಗಳ ಪರಿಶೀಲನೆ ಮತ್ತು ಖಜಾನೆ ವ್ಯವಸ್ಥೆಯ ದುರಸ್ತಿ ಕೈಗೊಳ್ಳುವ ಉದ್ದೇಶದಿಂದ ಜುಲೈ 14ರಂದು ‘ರತ್ನ ಭಂಡಾರ’ವನ್ನು ತೆರೆಯಲಾಗಿತ್ತು.
ಖಜಾನೆಯ ಒಳ ಮತ್ತು ಹೊರಗಿನ ಕಪಾಟುಗಳಲ್ಲಿ ಇರಿಸಿರುವ ಆಭರಣಗಳು ಮತ್ತು ಇತರೆ ಮೌಲ್ಯಯುತ ವಸ್ತುಗಳನ್ನು ಮರದ ಪೆಟ್ಟಿಗೆಗಳಲ್ಲಿ ಇರಿಸಿ ತಾತ್ಕಾಲಿಕವಾಗಿ ಸ್ಟ್ರಾಂಗ್ ರೂಂಗೆ ಸ್ಥಳಾಂತರಿಸಲು ನಾಲ್ಕು ದಿನಗಳ ನಂತರ ಮತ್ತೆ ತೆರೆಯಲಾಗುವುದು ಎಂದು ಎಸ್‌ಜೆಟಿಎ ಹೇಳಿದೆ.

