ನವದೆಹಲಿ : ಪ್ರಧಾನಿ ನರೇಂದ್ರ ಮೋದಿ  ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಾಳೆಯಿಂದ ಜಿಎಸ್ಟಿ ಸುಧಾರಣೆಯ ನಿಯಮಗಳು ಜಾರಿಗೆ ಬರುತ್ತಿದ್ದು, ನಮೋ ತಮ್ಮ ಭಾಷಣದಲ್ಲಿ ಜಿಎಸ್‌ಟಿ ದರಗಳಲ್ಲಿನ ಬದಲಾವಣೆಗಳು ಮತ್ತು “ವೋಕಲ್ ಫಾರ್ ಲೋಕಲ್” ಎಂಬ ಕಲ್ಪನೆಯ ಕುರಿತು ಚರ್ಚಿಸುವ ನಿರೀಕ್ಷೆಯಿದೆ

ಹೊಸ ಜಿಎಸ್​ಟಿ 2.0 ದರಗಳು ನಾಳೆಯಿಂದ ದೇಶದಲ್ಲಿ ಜಾರಿಗೆ ಬರಲಿವೆ. ಈ ಬಗ್ಗೆ ಮೋದಿ ಮಾತಾಡಲಿದ್ದು, ಇದಲ್ಲದೆ H1B ವೀಸಾ ಹಾಗೂ ಭಾರತ ಹಾಗೂ ಅಮರಿಕದ ನಡುವಿನ ಸುಂಕ ವಿವಾದದ ಬಗ್ಗೆ ಮಾತಾಡುವ ಸಾಧ್ಯತೆ ಇದೆ.

ಪ್ರಮುಖವಾಗಿ ಎಚ್-1ಬಿ ವೀಸಾಗೆ ಒಂದು ಲಕ್ಷ ಡಾಲರ್ ಶುಲ್ಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಇದೇ ವಿಚಾರವನ್ನು ಪ್ರಧಾನಿ ಭಾಷಣದಲ್ಲಿ ಉಲ್ಲೇಖಿಸಿ ಟಾಂಗ್ ನೀಡುವ ಸಾಧ್ಯತೆ ಇದೆ.

ಅಮೆರಿಕದ ಈ ಕ್ರಮವು ಅಲ್ಲಿ ಕೆಲಸ ಮಾಡುವ ಭಾರತೀಯ ಟೆಕ್ಕಿಗಳ ದೊಡ್ಡ ಸಮೂಹದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅಲ್ಲದೆ, ಸುಂಕ ಸಮರದಿಂದಾಗಿ ಅಮೆರಿಕ-ಭಾರತ ಸಂಬಂಧ ಹದಗೆಟ್ಟಿದ್ದು ಈ ಬಗ್ಗೆಯೂ ಮೋದಿ ಪ್ರಸ್ತಾಪ ಮಾಡಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.