ಉತ್ತರ ಪ್ರದೇಶ: ನಕಲಿ ಟೊಮೇಟೊ ಸಾಸ್ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ ನಡೆಸಿದ್ದು, ಭಾರೀ ಪ್ರಮಾಣದ ನಕಲಿ ಸಾಸ್ ಗಳನ್ನು ವಶಪಡಿಸಿಕೊಂಡಿರುವ ಘಟನೆ ಸಹರನ್ ಪುರ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿ ತಯಾರಾಗುವ ಟೊಮೇಟೊ ಸಾಸ್ ಉತ್ತರ ಪ್ರದೇಶ ಮಾತ್ರವಲ್ಲದೆ ನೆರೆಯ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿತ್ತು. ಇದೀಗ ಆಹಾರ ಸುರಕ್ಷತಾ ಇಲಾಖೆ ದಿಢೀರ್ ದಾಳಿ ನಡೆಸಿ ಸುಮಾರು 800 ಕೆಜಿ ಮೌಲ್ಯದ ಸಾಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ನಕಲಿ ಟೊಮೇಟೊ ಸಾಸ್ ಗೆ ಆರೊರೂಟ್ ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಬಳಸಿ ಸಿಂಥೆಟಿಕ್ ಟೊಮೆಟೊ ಸಾಸ್ ತಯಾರಿಸಲಾಗುತ್ತಿತ್ತು. ಇದರ ಜೊತೆಗೆ ಇನ್ನಿತರ ಕಲಬೆರಕೆ ವಸ್ತು ತಯಾರಿಸಲಾಗುತ್ತಿತ್ತು. ಆಹಾರ ಇಲಾಖೆ ದಾಳಿಯಿಂದ 1 ಲಕ್ಷದ ಮೌಲ್ಯದ ಸರಕು ಜಪ್ತಿ ಮಾಡಲಾಗಿದ್ದು, ಅಕ್ರಮವಾಗಿ ನಡೆಸುತ್ತಿದ್ದ ಕಾರ್ಖಾನೆಗೆ ಬೀಗ ಹಾಕಲಾಗಿದೆ.

