ಕೊಲ್ಕತ್ತಾ: ಭಾರತದಲ್ಲಿ ಗಣೇಶ ಹಬ್ಬಕ್ಕೆ ಮಹತ್ವದ ಸ್ಥಾನವಿದೆ. ಕೊಲ್ಕತ್ತಾದ ಭವಾನಿಪುರದಲ್ಲಿ ಗಣೇಶ ಚತುರ್ಥಿಯ ಶುಭದಿನದಂದು 500 ಕೆಜಿ ತೂಕದ ಲಾಡನ್ನು ಸಿಹಿ ಅಂಗಡಿಯ ಮಾಲೀಕರೊಬ್ಬರು ತಯಾರಿಸಿದ್ದಾರೆ.

500 ಕೆಜಿ ತೂಕದ ಲಾಡು ಬಗ್ಗೆ ಮಾತನಾಡಿರುವ ಪ್ರಿಯಾಂಕ ಮಲ್ಲಿಕ, ನಮ್ಮ ಹಬ್ಬಗಳು ಶುರುವಾಗುವುದೇ ಗಣೇಶ ಚತುರ್ಥಿಯಿಂದ ಇದು ನಮಗೆ ತುಂಬಾ ಪವಿತ್ರವಾದ ದಿನ. ನಮ್ಮ ಸ್ವೀಟ್ ಶಾಪ್​ಗೆ ಸುಮಾರು 140 ವರ್ಷಗಳ ಇತಿಹಾಸವಿದೆ. ಈ ಬಾರಿ ನಾವು 500 ಕೆಜಿ ತೂಕದ ಲಡ್ಡು ಮಾಡಿ ಅದನ್ನು ಗಣೇಶನಿಗೆ ಅರ್ಪಿಸಿದ್ದೇವೆ ಎಂದು ಹೇಳಿದ್ದಾರೆ.