ಪುಣೆ : ಅಪ್ರಾಪ್ತ ಬಾಲಕ ತನ್ನ ತಂದೆಯ ಪೋರ್ಷೆ ಕಾರನ್ನು ಮದ್ಯದ ಅಮಲಿನಲ್ಲಿ ಚಲಾಯಿಸಿ ಇಬ್ಬರ ಬಲಿ ಪಡೆದಿದ್ದ. ಈ ಸುದ್ದಿ ಬಾರಿ ಸಂಚಲನ ಮೂಡಿಸಿತ್ತು. ಬಾಲಕನನ್ನು ರಿಮಾಂಡ್ನಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ. ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಬಂಧಿಸಿದ್ದು ತಪ್ಪು ಎಂಬುದಾಗಿ ಕೋರ್ಟ್ ಇದೇ ವೇಳೆ ಅಭಿಪ್ರಾಯಪಟ್ಟಿದೆ. ರಿಮಾಂಡ್ ಆದೇಶವನ್ನು ಕಾನೂನುಬಾಹಿರವೆಂದು ಘೋಷಿಸಿದೆ.
ಮೇ ತಿಂಗಳಲ್ಲಿ 17 ವರ್ಷದ ಬಾಲಕ ಚಲಾಯಿಸುತ್ತಿದ್ದ ಪೋರ್ಷೆ ಕಾರು ಬೈಕ್ಗೆ ಡಿಕ್ಕಿ ಹೊಡೆದಿತ್ತು. ಈ ಪ್ರಕರಣದಲ್ಲಿ ಬಾಲಕನಿಗೆ 14 ಗಂಟೆಯ ಒಳಗೆ ಜಾಮೀನು ನೀಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಕಾರು ಚಲಾಯಿಸಿದ್ದ ಬಾಲಕ ಸೇರಿ ಹದಿಹರೆಯದವನನ್ನು ಬಾಲಾಪರಾಧಿ ನ್ಯಾಯ ಮಂಡಳಿ (ಜೆಜೆಬಿ) ರಿಮಾಂಡ್ ಗೆ ನೀಡಿತ್ತು. ಇದೀಗ ಜಾಮಿನು ಘೋಷಿಸಿದೆ.

