ಮುಂಬೈ: ಇತ್ತೀಚಿನ ದಿನಗಳಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಹೆಸರು ಸುದ್ದಿಯಲ್ಲಿರುವಂತೆ ಇದೀಗ ಅವರ ಪೋಷಕರಿಗೂ ಕಂಟಕ ಎದುರಾಗಿದೆ ಅದರಂತೆ ಪೂಜಾ ಖೇಡ್ಕರ್ ಅವರ ತಾಯಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಭೂ ವಿವಾದಕ್ಕೆ ಸಂಬಂಧಿಸಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.ಮನೋರಮಾ ಖೇಡ್ಕರ್ ಅವರನ್ನು ರಾಯಗಢ ಜಿಲ್ಲೆಯ ಮಹಾದ್‌ನಿಂದ ಬಂಧಿಸಿ ಪುಣೆಗೆ ಕರೆತರಲಾಗಿದ್ದು, ಪ್ರಾಥಮಿಕ ವಿಚಾರಣೆ ಬಳಿಕ ಬಂಧಿಸಲಾಗುವುದು ಎಂದು ಪುಣೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ದೇಶಮುಖ್ ತಿಳಿಸಿದ್ದಾರೆ.

