ನವದೆಹಲಿ : ನಕಲಿ ದಾಖಲೆ ಸೃಷ್ಟಿಸಿ ವಿವಾದಕ್ಕೆ ಕಾರಣವಾಗಿದ್ದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ನೇಮಕಾತಿಯನ್ನು ರದ್ದು ಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಐಎಎಸ್ ಆಗಿ ನೇಮಕ ಆದ ನಂತರ ಸಾಕಷ್ಟು ಅಧಿಕಾರ ದುರ್ಬಳಕೆ ಮಾಡಿಕೊಂಡು ಕುಖ್ಯಾತಿ ಪಡೆದಿರುವ ಮಹಾರಾಷ್ಟ್ರದ ಪುಣೆಯ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸರಣಿ ಕ್ರಮಗಳನ್ನು ಆರಂಭಿಸಿದೆ.
ಇದರ ಮೊದಲ ಭಾಗವಾಗಿ ಶುಕ್ರವಾರ ಪೂಜಾ ವಿರುದ್ಧ ಯುಪಿಎಸ್ಸಿ ಎಫ್ಐಆರ್ ದಾಖಲಿಸಿದೆ. ಅಲ್ಲದೆ, ನಾಗರಿಕ ಸೇವಾ ಪರೀಕ್ಷೆ-2022ರಲ್ಲಿ ಆಕೆಯ ಆಯ್ಕೆಯನ್ನು ‘ನೇಮಕವನ್ನು) ರದ್ದುಗೊಳಿಸಲು ಶೋಕಾಸ್ ನೋಟಿಸ್ ನೀಡಿದೆ. ಇದೇ ವೇಳೆ, ಭವಿಷ್ಯದಲ್ಲಿ ಆಕೆ ಯಾವುದೇ ಪರೀಕ್ಷೆ ಹಾಗೂ ನೇಮಕಾತಿಗಳಲ್ಲಿ ಪಾಲ್ಗೊಳ್ಳದಂತೆ ದಿಬಾರ್ ಮಾಡುವ ನೋಟಿಸ್ ಕೂಡ ಜಾರಿ ಮಾಡಿದೆ. ಆಯೋಗದ ಮುಂದಿನ ಕ್ರಮವು ಖೇಡ್ಕರ್ ಅವರ ಉತ್ತರವನ್ನು ಅವಲಂಬಿಸಿರುತ್ತದೆ.

