ಬಿಹಾರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ಮೀಸಲಾತಿ ವಿಚಾರದಲ್ಲಿ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಇಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಬಿಹಾರದಲ್ಲಿ ಬೆಳಗ್ಗೆಯಿಂದಲೇ ಭಾರತ್ ಬಂದ್‌ ನಡೆಯುತ್ತಿದ್ದು, ಪ್ರತಿಭಟನಾಕಾರರು ಬೆಳಗ್ಗೆಯಿಂದಲೇ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವೇಳೆ ಗದ್ದಲ ಸೃಷ್ಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಲಾಠಿ ಚಾರ್ಜ್ ಸಂದರ್ಭದಲ್ಲಿ, ಪಾಟ್ನಾ ಸದರ್ ಎಸ್‌ಡಿಎಂ ಮೇಲೆ ಪೊಲೀಸರು ಆಕಸ್ಮಿಕವಾಗಿ ಲಾಠಿಯಿಂದ ಹೊಡೆದ ಘಟನೆ ನಡೆದಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಬಿಹಾರದ ಪಾಟ್ನಾದಲ್ಲಿ ನಡೆದ ಭಾರತ್ ಬಂದ್ ವೇಳೆ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡುವಾಗ ಪೊಲೀಸರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್​ರನ್ನೇ ಪ್ರತಿಭಟನಾಕಾರರು ಎಂದು ಭಾವಿಸಿ ಹೊಡೆದಿರುವುದು ಕಂಡುಬಂದಿದೆ.

ಪ್ರತಿಭಟನಾಕಾರರನ್ನ ನಿಯಂತ್ರಿಸುತ್ತಿದ್ದ ಪೊಲೀಸರು ಗೊಂದಲದ ಮಧ್ಯೆ, ಪ್ರತಿಭಟನಾಕಾರರನ್ನ ಸಮಾಧಾನ ಪಡಿಸಿ ನಿಂತಿದ್ದ ಎಸ್‌ಡಿಎಂಗೂ ಒಂದೇಟು ಕೊಟ್ಟಿದ್ದಾರೆ. ತಕ್ಷಣವೇ ಅಲ್ಲಿದ್ದ ಇತರ ಪೊಲೀಸರು ಇದನ್ನ ಗಮನಿಸಿ ಮತ್ತೊಂದು ಏಟು ಹೊಡೆಯುವುದನ್ನ ತಡೆದು, ಅವರು ಐಎಎಸ್​ ಅಧಿಕಾರಿ ಎಂಬುದನ್ನ ಮನವರಿಕೆ ಮಾಡಿದ್ದಾರೆ. ಇನ್ನು ತಮಗೆ ಲಾಠಿ ಏಟು ಹೊಡೆದ ನಂತರ ಎಸ್‌ಡಿಎಂ ಕೋಪದಲ್ಲಿ ಪೊಲೀಸ್​ನತ್ತಾ ನೋಡಿದ್ದಾರೆ. ನಂತರ ಪೊಲೀಸ್​ ಆ ಅಧಿಕಾರಿ ಬಳಿ ಬಂದು ಕ್ಷಮೆ ಕೇಳಿದ್ದಾರೆ.

Hope he doesn't lose his job…

pic.twitter.com/5ckIhIpeF9

— Mr Sinha (@MrSinha_) August 21, 2024