ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾಗಿಯಾಗಿ ತವರಿಗೆ ಆಗಮಿಸಿರುವ ಪದಕ ವಿಜೇತ ಸ್ಪರ್ಧಿಗಳಿಗೆ ಅದ್ಧೂರಿ ಸ್ವಾಗತ ಕೋರಿದ್ದು, ದಿಲ್ಲಿಯ ಕೆಂಪು ಕೋಟೆಯಲ್ಲಿ ಗುರುವಾರ ಜರುಗಿದ ಸ್ವಾತಂತ್ರ್ಯೋತ್ಸವದಲ್ಲಿ ಗಣ್ಯರ ಸಾಲಿನಲ್ಲಿ ಕೂರುವ ಅವಕಾಶ ಪಡೆದ ಒಲಿಂಪಿಕ್ಸ್ ಪದಕ ವಿಜೇತರು ಬಳಿಕ ಪ್ರಧಾನಿ ನಿವಾಸದಲ್ಲಿ ನರೇಂದ್ರ ಮೋದಿಯವರ ಭೇಟಿಯಾಗಿ ಗೌರವ ಸ್ವೀಕರಿಸಿದರು.
ಈ ವೇಳೆ ಆಟಗಾರರು ಪ್ರಧಾನಿಗೆ ತಮ್ಮ ಪದಕಗಳ ತೋರಿಸಿ ಜೊತೆಗೆ ಹಾಕಿ ಸ್ಟಿಕ್ ಹಾಗೂ ಆಟಗಾರರು ಸಹಿ ಮಾಡಿರುವ ಜೆರ್ಸಿಯ ಪ್ರಧಾನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬಳಿಕ ಒಲಿಂಪಿಕ್ಸ್‌ನ ಶೂಟಿಂಗ್ ವಿಭಾಗದಲ್ಲಿ ಎರಡು ಕಂಚಿನ ಪದಕಗಳ ಗೆದ್ದ ಮನು ಭಾಕರ್, ಮೋದಿಯವರಿಗೆ ಒಲಿಂಪಿಕ್ಸ್‌ನಲ್ಲಿ ಬಳಸಿದ ಪಿಸ್ತೂಲ್ ತೋರಿಸಿ ವಿವರಣೆ ನೀಡಿದ್ದಾರೆ. ಈ ವೇಳೆಯೇ ಸರಬ್ಜೋತ್ ಸಿಂಗ್, ಅಮನ್ ಸೆಹ್ರಾವತ್ ಮತ್ತು ಸ್ವಪ್ನಿಲ್ ಕುಸಾಲೆಯವರು ಕೂಡ ಪ್ರಧಾನಿ ಮೋದಿಯವರ ಭೇಟಿಯಾಗಿ ಪದಕ ತೋರಿಸಿದರು.

