ನವದೆಹಲಿ : ಅಹಮದಾಬಾದ್‌ನಲ್ಲಿ ಪತನಗೊಂಡ ವಿಮಾನದ ಒಂದು ಬ್ಲಾಕ್ ಬಾಕ್ಸ್ ಮತ್ತು ಡಿವಿಆರ್ ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬ್ಲ್ಯಾಕ್‌ಬಾಕ್ಸ್‌ನಲ್ಲಿನ ದತ್ತಾಂಶಗಳ ಸಹಾಯದಿಂದ ವಿಮಾನ ಅಪಘಾತಕ್ಕೆ ನಿಖರ ಕಾರಣ ಏನು ಎಂಬುದನ್ನು ಪತ್ತೆಹಚ್ಚಬಹುದು.
ಅಹಮದಾಬಾದ್‌ನಿಂದ ಲಂಡನ್‌ನತ್ತ ಹೊರಟಿದ್ದ ಏರ್ ಇಂಡಿಯಾ ವಿಮಾನ AI171 ನಿನ್ನೆ ಮಧ್ಯಾಹ್ನ 1.39ಕ್ಕೆ ಟೇಕ್ ಆಫ್ ಆಗಿತ್ತು. ಆದರೆ, 25 ಸೆಕೆಂಡ್‌ಗಳಲ್ಲೇ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದಿತ್ತು. ವಿಮಾನದಲ್ಲಿದ್ದ 242 ಪ್ರಯಾಣಿಕರ ಪೈಕಿ 241 ಮಂದಿ ಹಾಗೂ ಕಟ್ಟಡದಲ್ಲಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಬ್ಲ್ಯಾಕ್ ಬಾಕ್ಸ್ :
ಬ್ಲ್ಯಾಕ್ ಬಾಕ್ಸ್ ವಿಮಾನದಲ್ಲಿ ಬಳಸಲಾಗುವ ಒಂದು ಎಲೆಕ್ಟ್ರಾನಿಕ್ ಸಾಧನ. ಇದನ್ನು ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಅಂತಲೂ ಕರೆಯಲಾಗುತ್ತೆ. ಇದರಲ್ಲಿ ವಿಮಾನದ ಕಾರ್ಯಾಚರಣೆಯ ಮಾಹಿತಿ ಮತ್ತು ಕಾಕ್‌ಪಿಟ್ ಸಂಭಾಷಣೆಗಳನ್ನು ದಾಖಲಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಏನೆಂದರೆ, ವಿಮಾನ ಅಪಘಾತವಾದರೆ ಅದಕ್ಕೇನು ಕಾರಣ ಅನ್ನೋದನ್ನು ತನಿಖೆ ಮಾಡಲು ಸಹಕಾರಿಯಾಗಿರುತ್ತದೆ.
ಬ್ಲ್ಯಾಕ್ ಬಾಕ್ಸ್ ವಿಮಾನದ ಎಂಜಿನ್ ವೇಗ, ಎತ್ತರ, ದಿಕ್ಕು, ಇಂಧನ ಮಟ್ಟ, ಮತ್ತು ಇತರ ತಾಂತ್ರಿಕ ಮಾಹಿತಿಯನ್ನು ದಾಖಲಿಸುತ್ತದೆ. ಈ ಡೇಟಾವನ್ನು ಸಂಗ್ರಹಿಸಿ, ಕ್ರ್ಯಾಶ್-ನಿರೋಧಕ ಮೆಮೊರಿಯಲ್ಲಿ ಸಂಗ್ರಹಿಸಲಾಗುತ್ತದೆ. ಇದು ಸಾಮಾನ್ಯವಾಗಿ 25 ಗಂಟೆಗಳವರೆಗಿನ ಡೇಟಾವನ್ನು ದಾಖಲಿಸುತ್ತದೆ. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಪೈಲಟ್‌ಗಳ ಸಂಭಾಷಣೆ, ರೇಡಿಯೋ ಸಂವಹನ, ಮತ್ತು ಕಾಕ್‌ಪಿಟ್‌ನಲ್ಲಿನ ಶಬ್ದಗಳನ್ನು, ಎಂಜಿನ್ ಶಬ್ದ, ಎಚ್ಚರಿಕೆ ಸಿಗ್ನಲ್‌ಗಳನ್ನು ರೆಕಾರ್ಡ್ ಮಾಡುತ್ತದೆ. ಇದು ಕೊನೆಯ 2 ಗಂಟೆಗಳ ಸಂಭಾಷಣೆಯನ್ನು ಸಂಗ್ರಹಿಸುತ್ತದೆ.
ಬ್ಲ್ಯಾಕ್ ಬಾಕ್ಸ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಬ್ಲ್ಯಾಕ್ ಬಾಕ್ಸ್ ಮತ್ತು ಇತರ ರೆಕಾರ್ಡರ್ಗಳನ್ನು ಪ್ರಯೋಗಾಲಯಕ್ಕೆ ತಂದ ಬಳಿಕ, ತಜ್ಞರು ಅವುಗಳ ಸ್ಥಿತಿ ಪರಿಶೀಲಿಸುತ್ತಾರೆ. ಡೇಟಾವನ್ನು ಸುಲಭವಾಗಿ ರಿಟ್ರೀವ್ ಮಾಡಬಹುದಾ ಎಂದು ಪರಿಶೀಲಿಸುತ್ತಾರೆ. ಸಮರ್ಪಕ ಸ್ಥಿತಿಯಲ್ಲಿದ್ದರೆ ಡೇಟಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ, ಹಾನಿಗೊಳಗಾಗಿದ್ದರೆ ಡೇಟಾ ರಿಟ್ರೀವ್ ಮಾಡಲು ಹೆಚ್ಚಿನ ಶ್ರಮ ಬೇಕಾಗುತ್ತದೆ.
ಬ್ಲ್ಯಾಕ್ ಬಾಕ್ಸ್ ಹೇಗೆ ವಿನ್ಯಾಸ ಮಾಡಿರ್ತಾರೆ?
ದುರ್ಘಟನೆ ನಡೆದಾಗ ಗುರುತಿಸಲು ಸುಲಭವಾಗಲಿ ಎಂದು ಬ್ಲಾಕ್ ಬಾಕ್ಸ್‌ಗಳನ್ನು ಕಿತ್ತಳೆ ಬಣ್ಣದಿಂದ ನಿರ್ಮಿಸಲಾಗಿತ್ತದೆ. ಇದ್ದನ್ನ ಟೈಟಾನಿಯಂನಿಂದ ತಯಾರಿಸಲಾಗಿರುತ್ತೆ. ಈ ಬಾಕ್ಸ್ಗೆ 1,100 ಸೆಕ್ಶಿಯಸ್ ತಾಪಮಾನ, 6,000 ಮೀಟರ್ ಆಳದ ಸಮುದ್ರದ ಒತ್ತಡ ತಡೆಯೋ ಶಕ್ತಿ ಹೊಂದಿದೆ. ನೀರಿನಲ್ಲಿ ಕಳೆದುಹೋದರೆ, ಅಲ್ಟ್ರಾಸಾನಿಕ್ ಬೀಕನ್ 30 ದಿನಗಳವರೆಗೆ ಸಿಗ್ನಲ್ ಕಳುಹಿಸುತ್ತದೆ. ಇದರಿಂದ ಹುಡುಕಾಟಕ್ಕೆ ಸಹಾಯವಾಗುತ್ತದೆ.
ಬ್ಲ್ಯಾಕ್ ಬಾಕ್ಸ್ ಎಲ್ಲಿ ಇಡಲಾಗುತ್ತದೆ?
ಬ್ಲ್ಯಾಕ್ ಬಾಕ್ಸ್‌ಗಳನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಏಕೆಂದರೆ ಅಪಘಾತದ ಸಂದರ್ಭದಲ್ಲಿ ಬ್ಲಾಕ್ಬಾಕ್ಸ್ ಹೆಚ್ಚು ಸುರಕ್ಷಿತವಾಗಿ ಇರಬೇಕು ಅಂತ ವಿಮಾನದ ಹಿಂಭಾಗದಲ್ಲಿ ಇರಿಸಲಾಗಿರುತ್ತದೆ.

