ನವದೆಹಲಿ: ಡಿಸೆಂಬರ್‌ನಲ್ಲಿ ವಿಮಾನಯಾನ ಸಂಸ್ಥೆ ಎದುರಿಸಿದ ವಿಮಾನ ಬಿಕ್ಕಟ್ಟಿನ ನಂತರ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಭಾಟಿಯಾ ಅವರು ಮಧ್ಯಂತರ ಆಧಾರದ ಮೇಲೆ ವಿಮಾನಯಾನ ಸಂಸ್ಥೆಯ ನಿರ್ವಹಣೆಯನ್ನು ವಹಿಸಿಕೊಂಡಿದ್ದಾರೆ. ‘ವೈಯಕ್ತಿಕ ಕಾರಣಗಳಿಂದಾಗಿ, ಇಂದಿನಿಂದ ಜಾರಿಗೆ ಬರುವಂತೆ ಇಂಡಿಗೋ ಸಿಇಒ ಹುದ್ದೆಗೆ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ. ನೋಟಿಸ್ ಅವಧಿಯನ್ನು ಮನ್ನಾ ಮಾಡಬೇಕೆಂದು ನಾನು ವಿನಂತಿಸುತ್ತೇನೆ’ ಎಂದು ಎಲ್ಬರ್ಸ್, ವಿಮಾನಯಾನ ಸಂಸ್ಥೆಯ ಸಹ-ಸಂಸ್ಥಾಪಕರೂ ಆಗಿರುವ ಭಾಟಿಯಾ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
2022 ರ ಸೆಪ್ಟೆಂಬರ್‌ನಿಂದ ಕಳೆದ ವರ್ಷದ ವರೆಗೆ ಇಂಡಿಗೋ ಸಿಇಒ ಆಗಿ ಸೇವೆ ಸಲ್ಲಿಸುವುದಕ್ಕೆ ಹೆಮ್ಮೆ ಎನಿಸಿದೆ. ಶ್ರೇಷ್ಠ ಇಂಡಿಗೋ ಕುಟುಂಬದ ಭಾಗವಾಗಿದ್ದು ಖುಷಿ ಎನಿಸಿದೆ ಎಂದು ಎಲ್ಬರ್ಸ್ ತಿಳಿಸಿದ್ದಾರೆ.

