ನವದೆಹಲಿ: ಎಲೆಕ್ಟ್ರಿಕ್ ಡಿಟಿಸಿ ಬಸ್ವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿರೋ ಘಟನೆ ಶಿವಾಜಿ ಪಾರ್ಕ್ ಮೆಟ್ರೋ ನಿಲ್ದಾಣ ಬಳಿ ನಡೆದಿದೆ.
ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ದೆಹಲಿ ಸರ್ಕಾರಿ ಬಸ್ ಮಂಗೋಲ್ಪುರಿ ಮತ್ತು ಆನಂದ್ ವಿಹಾರ್ ನಡುವೆ ಸಂಚರಿಸುತ್ತಿದ್ದಾಗ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಬಳಿಕ ಇ-ರಿಕ್ಷಾ ಡಿಕ್ಕಿ ಹೊಡೆದ್ದಾನೆ. ಇನ್ನು, ಈ ಘಟನೆ ಸಂಬಂಧ ಪಂಜಾಬಿ ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಆಟೋ ಚಾಲಕರು ಇದ್ದಕ್ಕಿದ್ದಂತೆ ಬಲಕ್ಕೆ ತಿರುಗಿಸಿದ್ದಾನಂತೆ. ಹೀಗಾಗಿ ಅಪಘಾತವನ್ನು ತಪ್ಪಿಸಲು ಬಸ್ ಚಾಲಕ ಸಹ ಬಲ ತಿರುವು ತೆಗೆದುಕೊಂಡಿದ್ದಾರೆ. ಆದರೆ ಕೊನೆಗೆ ಬಸ್ ಏಕಾಏಕಿ ಮೆಟ್ರೋ ಪಿಲ್ಲರ್‌ಗೆ ಬಂದು ಡಿಕ್ಕಿ ಹೊಡೆದಿದೆ.

