ಶೃಂಗೇರಿ : ಪೋಷಕರು ಕೊಳಲು ನುಡಿಸುವ ಶಾಲೆಗೆ ಸೇರಿಸದಿದ್ದಕ್ಕೆ ಮನನೊಂದು SSLC ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಎಸ್.ಕೆ.ಧ್ರುವ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಶೃಂಗೇರಿಯ ಹರಿಹರ ಬೀದಿಯ ಪಿಜಿಯಲ್ಲಿ ಘಟನೆ ನಡೆದಿದೆ. ಸದ್ಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕೊಳಲು ನುಡಿಸುವ ಶಾಲೆಗೆ ಸೇರಿಸುವಂತೆ ಪೋಷಕರಿಗೆ ಧ್ರುವ ಒತ್ತಾಯ ಮಾಡಿದ್ದಾನೆ. ಆದರೆ ಎಸ್ಎಸ್ಎಲ್ಸಿ ವ್ಯಾಸಂಗ ಮುಗಿದ ನಂತರ ಸೇರಿಸುವುದಾಗಿ ಪೋಷಕರು ಹೇಳಿದ್ದಾರೆ. ಇದರಿಂದ ಬೇಸರಗೊಂಡ ಧ್ರುವ ಪಿಜಿಯಲ್ಲಿದ್ದಾಗ ನೇಣಿಗೆ ಶರಣಾಗಿದ್ದಾನೆ.

