ಜಮ್ಮು ಕಾಶ್ಮೀರ : ಭಾರತವು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಹಿನ್ನಲೆ ಪಾಕ್ ಮೇಲೆ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ ಪಾಕ್ ಉಗ್ರರು ಎಲ್ಒಸಿ ಉದ್ದಕ್ಕೂ ಶೆಲ್ ದಾಳಿ ನಡೆಸಿದ್ದು, ಪರಿಣಾಮ 7 ಜನ ನಾಗರಿಕರು ಸಾವನ್ನಪ್ಪಿದ್ದರೆ, 38 ಜನ ಗಾಯಗೊಂಡಿದ್ದಾರೆ.

ಮಂಗಳವಾರ ತಡರಾತ್ರಿ ಪಾಕ್ ನ ಉಗ್ರರ 9 ಅಡಗುತಾಣದ ಮೇಲೆ ದಾಳಿ ನಡೆಸಿ ಲಷ್ಕರ್-ಇ-ತೈಬಾದ ಎಚ್‌ವಿಟಿ ಅಬ್ದುಲ್ ಮಲಿಕ್ ಮತ್ತು ಮುದಸ್ಸಿರ್ ಸೇರಿದಂತೆ ಸುಮಾರು 70 ಕ್ಕೂ ಹೆಚ್ಚು ಉಗ್ರರನ್ನು ಭಾರತ ಹೊಡೆದುರುಳಿಸಿದೆ.

ಇದೀಗ ಬುಧವಾರ ಬೆಳ್ಳಂಬೆಳಗ್ಗೆ ಪಾಕ್ ಸೇನೆ ಜಮ್ಮು ಮತ್ತು ಕಾಶ್ಮೀರದ ಬಳಿ ಕದನವಿರಾಮ ಉಲ್ಲಂಘಿಸಿ ಮತ್ತು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಮನಸ್ಸಿಗೆ ಬಂದಂತೆ ಗುಂಡಿನ ದಾಳಿ ಮಾಡಿದೆ. ಅಲ್ಲದೇ ಹಲವು ಕಡೆಯಿಂದ ಶೆಲ್ ದಾಳಿ ಮಾಡಿದೆ.

ಈ ದಾಳಿಯಲ್ಲಿ 7 ಜನ ನಾಗರಿಕರು ಸಾವನ್ನಪ್ಪಿದ್ದರೆ, 38 ಜನ ಗಾಯಗೊಂಡಿದ್ದಾರೆ. ಜೊತೆಗೆ ಪಾಕ್ ನ ಈ ದಾಳಿಗೆ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದ್ದು, ಪಾಕ್ ಸೇನೆಗೆ ಹಾನಿಯಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.