ನವದೆಹಲಿ : ಪಾಕಿಸ್ತಾನ ಭಯೋತ್ಪಾದಕ ತಯಾರಿಕೆಯ ಕಾರ್ಖಾನೆ ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.
ಅಲ್ಜೀರಿಯಾ ಮಾತಾಡಿದ ಅವರು ಪಾಕಿಸ್ತಾನ ಭಯೋತ್ಪಾದಕರನ್ನು ಪ್ರಾಯೋಜಿಸುತ್ತಿದೆ ಎಂದು ಓವೈಸಿ ಟೀಕಿಸಿದ್ದಾರೆ. ಪಾಕ್ ನ ಉಗ್ರರು ಮುಗ್ಧ ಜನರನ್ನು ಕೊಲ್ಲುವ ಮೂಲಕ ಇಸ್ಲಾಂನ ತತ್ವಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಗುಂಪುಗಳಿಗೂ ಮತ್ತು ಅಲ್-ಖೈದಾಕ್ಕೂ ಸಿದ್ಧಾಂತದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಅವರು ತಮಗೆ ಧಾರ್ಮಿಕ ಅನುಮತಿ ಇದೆ ಎಂದು ನಂಬುತ್ತಾರೆ, ಅದು ಸಂಪೂರ್ಣವಾಗಿ ತಪ್ಪು. ಇಸ್ಲಾಂ ಯಾವುದೇ ವ್ಯಕ್ತಿಯನ್ನು ಕೊಲ್ಲಲು ಅನುಮತಿಸುವುದಿಲ್ಲ. ದುರದೃಷ್ಟವಶಾತ್, ಅದು ಅವರ ಸಿದ್ಧಾಂತವಾಗಿದೆ ಎಂದು ಅಲ್ಲೀರಿಯಾದಲ್ಲಿ ಓವೈಸಿ ಹೇಳಿದರು.
ವಿಶ್ವ ಶಾಂತಿಯ ಹಿತದೃಷ್ಟಿಯಿಂದ ಭಯೋತ್ಪಾದನೆಯ ಪ್ರಮುಖ ಪ್ರಾಯೋಜಕ ಪಾಕಿಸ್ತಾನವನ್ನು ನಿಯಂತ್ರಿಸಬೇಕಿದೆ ಎಂದು ಓವೈಸಿ ಆಗ್ರಹಿಸಿದರು. ಪಾಕ್ ಮೊಂಡುತನವನ್ನು ವಿದೇಶಗಳಲ್ಲಿ ಬಿಚ್ಚಿಡುವ ಸಲುವಾಗಿ ಪ್ರವಾಸ ಮಾಡ್ತಿರೋ ಕೇಂದ್ರದ ಸರ್ವ ಪಕ್ಷ ನಿಯೋಗದಲ್ಲಿ AIMIM ಕೂಡ ಭಾಗಿಯಾಗಿದೆ.

