Bengaluru 26°C
Ad

ಮುಂದಿನ 10 ವರ್ಷಗಳ ಕಾಲ ನಮ್ಮದೇ ಆಡಳಿತ: ನರೇಂದ್ರ ಮೋದಿ

ಮುಂದಿನ ಹತ್ತು ವರ್ಷಗಳ ಕಾಲ ನಾವೇ ಆಡಳಿತದಲ್ಲಿದ್ದು, ಅತ್ಯುತ್ತಮ ಆಡಳಿತ ನೀಡಲಿದ್ದೇವೆ. ನಾನು ಇದನ್ನು ಹೆಚ್ಚಿನ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಹೊಸದಿಲ್ಲಿ: ಮುಂದಿನ ಹತ್ತು ವರ್ಷಗಳ ಕಾಲ ನಾವೇ ಆಡಳಿತದಲ್ಲಿದ್ದು, ಅತ್ಯುತ್ತಮ ಆಡಳಿತ ನೀಡಲಿದ್ದೇವೆ. ನಾನು ಇದನ್ನು ಹೆಚ್ಚಿನ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

Ad
300x250 2

ನೂತನ ಎನ್‌ಡಿಎ ಸಂಸದರ ಸಭೆಯಲ್ಲಿ, ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಅವರು ಸಂಸದರನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ಜನತೆಯ ಸ್ಥಳೀಯ ಆಸೆ ಆಕಾಂಕ್ಷೆಗಳು, ರಾಷ್ಟ್ರೀಯ ಆಸೆ ಆಕಾಂಕ್ಷೆಗಳನ್ನು ಜತೆಗೆ ಜೋಡಿಸಿ ನಾವು ಈಡೇರಿಸಬೇಕಾಗಿದೆ. ಈ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಎನ್‌ಡಿಎ ನೂತನ ರಾಜನೀತಿಯೊಂದನ್ನು ತೆರೆದಿದೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಅವರ ಸರಕಾರವಿದೆ.

ಆದರೆ ಅಲ್ಲಿನ ಜನರು ಎನ್‌ಡಿಎಯನ್ನು ಅಪ್ಪಿಕೊಂಡಿದ್ದಾರೆ. ತಮಿಳುನಾಡು ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಅಲ್ಲಿನ ಜನರು ನಮ್ಮ ಧ್ವಜವನ್ನು ಎತ್ತಿ ಹಿಡಿಯಲು ಹೋರಾಡಿದರು. ಅಲ್ಲಿ ನಮ್ಮ ಮತಪ್ರಮಾಣ ಹೆಚ್ಚಿದೆ.

ಆಂಧ್ರಪ್ರದೇಶದಿಂದ 16 ಸಂಸದರನ್ನು ತಂದ ಚಂದ್ರಬಾಬು ನಾಯ್ಡು ಅವರನ್ನು ಮೋದಿ ಶ್ಲಾಘಿಸಿದರು. ಪವನ್‌ ಕಲ್ಯಾಣ್‌ ಅವರು ʼಪವನʼ ಅಲ್ಲ ʼಬಿರುಗಾಳಿʼ ಎಂದು ಅವರು ಚಟಾಕಿ ಹಾರಿಸಿದರು.

ಕಾಂಗ್ರೆಸ್‌ ನಡವಳಿಕೆಯನ್ನು ಟೀಕಿಸಿದ ಅವರು, ಅವರ ಪಕ್ಷದ ಪ್ರಧಾನಿಯನ್ನೇ ಅವರು ಅವಮಾನಕ್ಕೊಳಪಡಿಸುತ್ತಿದ್ದರು. ಅವರ ಪಕ್ಷದ ಪ್ರಧಾನಿ ಹೊರಗೆ ಹೋದಾಗ ಕುಳಿತುಕೊಳ್ಳಲು ಆಸನ ಇರುತ್ತಿರಲಿಲ್ಲ.

ಅಂಥ ಸ್ಥಿತಿಯಿಂದ ಬಂದಿದ್ದರೂ ಈಗಲೂ ತಮ್ಮ ಗೌರವ ಉಳಿಸಿಕೊಳ್ಳುವುದು ಅವರಿಗೆ ಗೊತ್ತಿಲ್ಲ ಎಂದು ಅವರು ಚಾಟಿ ಬೀಸಿದರು. ಹೀಗಿದ್ದರೂ, ಪ್ರತಿಪಕ್ಷದ ಸಂಸದರು ಸದನಕ್ಕೆ ಬಂದು ಕಲಾಪಗಳಲ್ಲಿ ಭಾಗವಹಿಸುತ್ತಾರೆ ಎಂಬುದು ನನ್ನ ವಿಶ್ವಾಸ ಎಂದರು.

ಭಾರತದಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿನ ಬಗ್ಗೆ ಮೋದಿ ಲೇವಡಿ ಮಾಡಿದರು. 10 ವರ್ಷಗಳ ಬಳಿಕವೂ ಅದು ಪಾಠ ಕಲಿತಿಲ್ಲ. ಹಿಂದಿನ ಮೂರೂ ಚುನಾವಣೆಗಳಲ್ಲಿ ಗೆದ್ದ ಸೀಟುಗಳನ್ನು ಸೇರಿಸಿದರೂ ಈ ಸಲ ಬಿಜೆಪಿ ಗೆದ್ದು ಸೀಟುಗಳಷ್ಟು ಆಗಲಾರದು ಎಂದರು. ಕಳೆದ 10 ವರ್ಷಗಳಲ್ಲಿ ಅದು ಸದನದಲ್ಲಿ ಒಳ್ಳೆಯ ಚರ್ಚೆಗಳನ್ನೇ ಮಾಡಿಲ್ಲ. ಅದಕ್ಕಾಗಿಯೇ ಪ್ರತಿಪಕ್ಷದಲ್ಲೇ ಕುಳಿತುಕೊಳ್ಳಿ ಎಂದು ಜನ ದಾರಿ ತೋರಿಸಿದ್ದಾರೆ ಎಂದರು.

 

 

Ad
Ad
Nk Channel Final 21 09 2023
Ad