ನವದೆಹಲಿ : ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕರ ತಾಣಗಳ ಮೇಲೆ ಭಾರತೀಯ ಸೇನೆ ಅಟ್ಯಾಕ್ ಮಾಡಿದ್ದು, ಪಾಪಿ ರಾಷ್ಟ ಕೃಪಾಪೋಷಿತ 100ಕ್ಕೂ ಹೆಚ್ಚು ಉಗ್ರರು ನಿರ್ನಾಮವಾಗಿದ್ದಾರೆ. ಮಂಗಳವಾರ ಮಧ್ಯರಾತ್ರಿ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿದ್ದು. ಭಾರತೀಯ ಸೇನೆಯ ಆಕ್ರಮಣಕಾರಿ ಅಟ್ಯಾಕ್ ಗೆ ಉಗ್ರ ನೆಲೆಗಳು ಛಿದ್ರ ಛಿದ್ರವಾಗಿದೆ. 9 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ.

ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ನಾಯಕರನ್ನು ಗುರಿಯಾಗಿಸಿ ಅಟ್ಯಾಕ್ ಮಾಡಲಾಗಿದೆ. ಪಾಕಿಸ್ತಾನಿ ಮಿಲಿಟರಿ ನೆಲೆಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಬಹವಾಲ್ಪುರ್‌ನಲ್ಲಿರುವ ಜೈಷ್‌ಎ ಮೊಹಮ್ಮದ್ ನ ಪ್ರಧಾನ ಕಛೇರಿ ಮತ್ತು ಮುರಿದ್ಕೆಯಲ್ಲಿರುವ ಲಷ್ಕರ್ ಎ ತೊಯ್ಬಾ ನ ನೆಲೆಯನ್ನು ಟಾರ್ಗೆಟ್ ಮಾಡಲಾಗಿದೆ. ಭಾರತದ ನೆಲದಿಂದಲೇ ಇದನ್ನು ಈ ಕಾರ್ಯಾಚರಣೆ ನಡೆಸಲಾಗಿದೆ. ಮುಜಫರಾಬಾದ್, ಕೋಟ್ಲಿ, ಮುರಿಡ್ಕೆ ಪ್ರದೇಶಗಳಲ್ಲಿ ಶಿಬಿರಗಳನ್ನು ನಾಶಮಾಡಲಾಗಿದೆ.