ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 2024ರ ಕೇಂದ್ರ ಬಜೆಟ್ ಅನ್ನು ‘ಹಲ್ವಾ ಸಮಾರಂಭ’ ಎಂದು ಟೀಕಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಅನ್ನು ಟೀಕಿಸಿರುವ ರಾಹುಲ್ ಗಾಂಧಿ ಅವರ ಮಾತನ್ನು ಕೇಳಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಖ ಮುಚ್ಚಿಕೊಂಡು ನಗುತ್ತಿರುವ ವಿಡಿಯೋ ಎಲ್ಲ ಕಡೆ ಹರಿದಾಡುತ್ತಿದೆ. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಸಚಿವೆ ನಿರ್ಮಲಾ ಸೀತಾರಾಮನ್ ಕ್ಷಮೆ ಕೋರಬೇಕೆಂದು ಒತ್ತಾಯಿಸಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಮಂಡಿಸಿದ ಕೇಂದ್ರ ಬಜೆಟ್ 2024 ಬಗ್ಗೆ ಇಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು. ನಿರ್ಮಲಾ ಸೀತಾರಾಮನ್ ಹಲ್ವಾ ಮಾಡುತ್ತಿರುವ ಫೋಟೋವನ್ನು ತೋರಿಸಿದ ರಾಹುಲ್ ಗಾಂಧಿ ಬಿಜೆಪಿ ಬಜೆಟ್​ನ ಹಲ್ವಾ ವಿತರಿಸುತ್ತಿದೆ ಎಂದು ವಿವರಿಸಲು ಪ್ರಯತ್ನಿಸಿದರು.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಲ್ವಾ ಸಮಾರಂಭದ ಚಿತ್ರವನ್ನು ತೋರಿಸಲು ಪ್ರಯತ್ನಿಸಿದರು. ಆದರೆ ಅದಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಿರಾಕರಿಸಿದರು. ಆದರೆ ಈ ಸಮಯದಲ್ಲಿ ಅವರು ಏನನ್ನೋ ವಿವರಿಸಲು ಪ್ರಯತ್ನಿಸಿದಾಗ ಅದನ್ನು ಕೇಳಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹಣೆಯ ಮೇಲೆ ತಮ್ಮ ಎರಡೂ ಕೈಗಳನ್ನು ಮುಚ್ಚಿಕೊಂಡು ನಕ್ಕರು.

He says, "Budget ka halwa' is being distributed in this photo. I can't see one OBC or tribal or a Dalit officer in this. Desh ka… pic.twitter.com/BiFRB0VTk3

— ANI (@ANI) July 29, 2024