ತಿರುವನಂತಪುರಂ: ಕೇರಳದಲ್ಲಿ ನಿಫಾ ವೈರಸ್ ಜನರಲ್ಲಿ ಭೀತಿ ಹೆಚ್ಚಿಸಿದೆ.ನಿನ್ನೆಯಷ್ಟೇ ನಿಫಾ ಸೋಂಕು 14 ವರ್ಷದ ಬಾಲಕ ಹೃದಯಾಘಾತದಿಂದ ಸಾವನಪ್ಪಿದ್ದ. ಇದರ ಬೆನ್ನಲ್ಲೇ ವಿವಿಧ ಜಿಲ್ಲೆಗಳಲ್ಲಿ ಒಟ್ಟು ಆರು ಜನರಲ್ಲಿ ನಿಫಾ ವೈರಸ್ ಕಂಡುಬಂದಿದೆ. ಇನ್ನು ರಾಜ್ಯದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ನಿನ್ನೆ ಮೃತಪಟ್ಟ ಬಾಲಕ ಜೊತೆ ನೇರ ಸಂಪರ್ಕ ಹೊಂದಿದ್ದ 13ಮಂದಿಯ ವೈದ್ಯಕೀಯ ಪರೀಕ್ಷೆಯ ವರದಿ ಬರಬೇಕಾಗಿದೆ.
ಈಗಾಗಲೇ ಆರೋಗ್ಯ ಇಲಾಖೆ ಒಟ್ಟು 350ಸಂಪರ್ಕಿತರ ಪಟ್ಟಿ ತಯಾರು ಮಾಡಿದೆ. ಅವರಲ್ಲಿ 101 ಜನರನ್ನು ಗಂಭೀರ ಎಂದು ಪರಿಗಣಿಸಲಾಗಿದೆ.ಈ ಪಟ್ಟಿಯಲ್ಲಿ 68 ಆರೋಗ್ಯ ಸಿಬ್ಬಂದಿಗಳೂ ಇದ್ದಾರೆ. ಬಾಲಕ ಸೋಂಕಿಗೆ ತುತ್ತಾದ ಬಳಿಕ ಖಾಸಗಿ ಬಸ್‌ನಲ್ಲಿ ಪ್ರಯಾಣಿಸಿದ್ದ ಎನ್ನಲಾಗಿದೆ. ಈ ಹಿನ್ನಲೆ ಸರ್ಕಾರ ಜನರಿಗೆ ಎಚ್ಚರದಿಂದ ಇರುವಂತೆ ಸೂಚನೆ ನೀಡಿದೆ

