ಅಯೋಧ್ಯೆ: ರಾಮಮಂದಿರದಲ್ಲಿ ಸೇವೆ ಸಲ್ಲಿಸುವ ಅರ್ಚಕರಿಗೆ ಹೊಸ ವಸ್ತ್ರ ಸಂಹಿತೆ ಜಾರಿಯಾಗಿದೆ. ಇನ್ಮುಂದೆ ಅರ್ಚಕರು ಬಿಳಿ ಧೋತಿ ಮತ್ತು ಹಳದಿ ಕುರ್ತಾದಲ್ಲಿ (ಚೌಬಂದಿ) ಕಾಣಿಸಿಕೊಳ್ಳಲಿದ್ದಾರೆ. ರಾಮಮಂದಿರ ಟ್ರಸ್ಟ್ ವತಿಯಿಂದ ಅರ್ಚಕರಿಗೆ ವಸ್ತ್ರವನ್ನು ನೀಡಲಾಗುತ್ತಿದೆ.
ರಾಮಮಂದಿರಲ್ಲಿ ಸೇವೆ ಸಲ್ಲಿಸುವ ಅರ್ಚಕರಿಗೆ ಡ್ರೆಸ್ ಕೋಡ್ ಮಾತ್ರವಲ್ಲದೆ, ಆ್ಯಂಡ್ರಾಯ್ಡ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ. ರಾಮಲಲ್ಲಾನನ್ನು ಪೂಜಿಸುವ ಎಲ್ಲಾ 25 ಅರ್ಚಕರಿಗೆ ಕೀಪ್ಯಾಡ್ ಫೋನ್ಗಳನ್ನು ನೀಡಲಾಗಿದೆ. ಇನ್ನು ಅರ್ಚಕರು ಆ್ಯಂಡ್ರಾಯ್ಡ್ ಫೋನನ್ನು ದೇವಸ್ಥಾನದೊಳಗೆ ನಿರ್ಮಿಸಲಾದ ಲಾಕರ್ನಲ್ಲಿ ಇರಿಸಬೇಕಿದೆ. ಇದಲ್ಲದೆ ದೇವಾಲಯ ಬಳಿ ಫೋಟೋ ಮತ್ತು ವಿಡಿಯೋಗ್ರಾಫಿ ನಿಷೇಧಿಸಲಾಗಿದೆ. ಟ್ರಸ್ಟ್ನಲ್ಲಿ ಕೆಲಸ ಮಾಡುವ ಅರ್ಚಕರಿಗೆ ಬೇಸಿಗೆ, ಮಳೆಗಾಲ, ಚಳಿಗಾಲಕ್ಕೆ ತಕ್ಕಂತೆ ಮೂರು ಸೆಟ್ ಉಡುಪು ಒದಗಿಸಲಾಗುತ್ತದೆ ಎಂದು ತಿಳಿದು ಬಂದಿದೆ

