ನವದೆಹಲಿ: ಭಗವಂತನ ಸೃಷ್ಟಿಯಲ್ಲಿ ಮಾನವನ ಮೆದುಳು ಎಲ್ಲದಕ್ಕಿಂತ ಶಕ್ತಿಶಾಲಿ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಕೋಡಿಂಗ್ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಮನುಷ್ಯರ ಜಾಗವನ್ನು ಆಕ್ರಮಿಸುವ ಬಗ್ಗೆ ಪ್ರತಿಕ್ರಿಯಿಸಿದ ಮೂರ್ತಿ, ೧೯೭೫ರಲ್ಲಿ ಕೇಸ್ ಟೂಲ್ ಪರಿಚಯಿಸಲಾದಾಗ ಇದೇ ವಾದವನ್ನು ಮಾಡಲಾಗಿತ್ತು. ಆದರೆ ಅಸಲಿಗೆ ಹಾಗೆ ಆಗಲಿಲ್ಲ ಎಂದು ಹೇಳಿದರು.
ಕೃತಕಬುದ್ದಿಮತ್ತೆಯ ಬೆಳವಣಿಗೆಯೊಂದಿಗೆ ಅವುಗಳಿಂದ ಆಗುವ ಅನುಕೂಲಗಳು ಅನಾವರಣಗೊಳ್ಳುತ್ತಿದ್ದು, ಅದರ ಜೊತೆಗೇ ಉದ್ಯೋಗ ಮಾರುಕಟ್ಟೆಯ ಮೇಲೆ ಅದು ಬೀರುವ ಪರಿಣಾಮದ ಬಗೆಗಿನ ಚರ್ಚೆಗಳು ಶುರುವಾಗಿವೆ.

