ಮುಂಬೈ:  ಚಲಿಸುತ್ತಿದ್ದ  ರೈಲಿನಲ್ಲಿ ಪ್ರಯಾಣಿಕರು ಓಡಾಡುವ ಜಾಗದಲ್ಲಿ  ಮುಸ್ಲಿಂ ಪ್ರಯಾಣಿಕರು ನಮಾಜ್‌ ಮಾಡಲು ಮುಂದಾಗಿರುವ ಘಟನೆಯೊಂದು ನಡೆದಿದೆ. ವಿಷಯ ತಿಳಿದ ಟಿಟಿಇ ಅವರಿ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.ಟಿಟಿಇ ಹೀಗೆ ಪ್ರಯಾಣಿಕರು ಓಡಾಡುವ ಸ್ಥಳದಲ್ಲಿ ಏಕೆ ನಮಾಜ್‌ ಮಾಡ್ತಿರಾ? ಅಷ್ಟಕ್ಕೂ ನಮಾಜ್‌ ಮಾಡ್ಲೇಬೇಕು ಅಂತಿದ್ರೆ ನಿಮ್ಮ ಸೀಟ್‌ ಅಲ್ಲಿ ಕುಳಿತು ನಮಾಜ್‌ ಮಾಡಿ ಅದು ಬಿಟ್ಟು ಇತರರಿಗೆ ತೊಂದರೆಕೊಡುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಟಿಟಿಇ ಮಾತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನು ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮುಸ್ಲಿಂ ಪ್ರಯಾಣಿಕರು ನಮಾಜ್‌ ಮಾಡಲು ಮುಂದಾಗಿದ್ದಾರೆ ಈ ವೇಳೆ ಟಿಟಿಇ ಸ್ಥಳಕ್ಕೆ ಬಂದು ಅವರನ್ನು ತಡೆದಿದ್ದಾರೆ. ಇನ್ನೇನು ಪ್ಲಾಸ್ಟಿಕ್‌ ಹಾಕಿಕೊಂಡು ನಮಾಜ್‌ ಕೂರಬೇಕು ಎನ್ನುವಷ್ಟರಲ್ಲಿ ಟಿಟಿಇ ಬಂದು ಬುದ್ಧಿ ಮಾತು ಹೇಳಿರುವುದನ್ನು ನಾವು ನೋಡಬುಹುದು. ನಮಾಜ್‌ ಮಾಡಲೇ ಬೇಕೆಂದಿದ್ದಾರೆ ತಮ್ಮ-ತಮ್ಮ ಸೀಟ್‌ನಲ್ಲಿ ಕುಳಿತು ಮಾಡುವಂತೆ ತಿಳಿಸಿದ್ದಾರೆ.

— Abhijit Majumder (@abhijitmajumder) August 13, 2024