ಹೊಸದಿಲ್ಲಿ: ಉತ್ತರ ಪ್ರದೇಶದ ಮೀರತ್‌ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಡಾ. ಉದಿತಾ ತ್ಯಾಗಿ ಅವರು ಮುಸ್ಲಿಮರನ್ನು “ಜಿಹಾದಿ ಹಂದಿಗಳು” ಎಂದು ಉಲ್ಲೇಖಿಸಿ, “ಮುಸ್ಲಿಮರು ಹಂದಿಗಳಂತೆ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ”, ಎಂದು ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ವಿಡಿಯೊ ಮತ್ತು ಸಂಬಂಧಿತ ಹಕ್ಕುಗಳ ಪ್ರಕಾರ, ಬಿಜೆಪಿ ಮಹಿಳಾ ಮೋರ್ಚಾದ ವಲಯ ಸಚಿವೆ ಆಗಿರುವ ತ್ಯಾಗಿ ಮೀರತ್‌ ನ ಪಿವಿಎಸ್ ಮಾಲ್‌ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಹಿಂದೂ ಕುಟುಂಬಗಳು ಶೀಘ್ರವಾಗಿ ಮದುವೆಯಾಗಬೇಕು ಮತ್ತು ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದಬೇಕು ಎಂದು ಕರೆ ನೀಡುವ ವೇಳೆ ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ವಿಡಿಯೋದ ಸತ್ಯಾಸತ್ಯತೆ ಅಥವಾ ಅದರಲ್ಲಿ ಕೇಳಿಬರುವ ಹೇಳಿಕೆಗಳ ಬಗ್ಗೆ ಬಿಜೆಪಿ ಅಥವಾ ತ್ಯಾಗಿ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಂದಿಲ್ಲ. ತ್ಯಾಗಿ ಅವರು ಈ ಹಿಂದೆಯೂ ಪ್ರಚೋದನಕಾರಿ ಭಾಷಣಗಳು ಹಾಗೂ ದ್ವೇಷಪೂರಿತ ರಾಜಕೀಯ ಪ್ರಚಾರಗಳ ಹಿನ್ನೆಲೆ ವಿವಾದಗಳಿಗೆ ಗುರಿಯಾಗಿದ್ದರು.

— Digital Nehru (@PMNehru) April 23, 2026