ಜಾರ್ಖಂಡ್: ದೇಶಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ರಾಷ್ಟ್ರೀಯ ಸ್ವಯಂಸೇವಕ ಸಂಘ ವನ್ನು ಸೇರುತ್ತಿದ್ದಾರೆ. ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಜನರು ಆರ್‌ಎಸ್‌ಎಸ್‌ ಸೇರುವ ಮೂಲಕ ಸಂಪರ್ಕ ಸಾಧಿಸುತ್ತಿದ್ದಾರೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಹೇಳಿದ್ದಾರೆ.

ರಾಂಚಿಯಲ್ಲಿ ನಡೆದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದಲ್ಲಿ ಜೂನ್ ಅಂತ್ಯದವರೆಗೆ ಒಟ್ಟು 66, 529 ಜನರು ಸಂಪರ್ಕಿಸುವ ಮೂಲಕ ಸಂಘಕ್ಕೆ ಸೇರಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು 2012ರಲ್ಲಿ ‘ಜಾಯಿನ್​ ಆರ್​ಎಸ್​ಎಸ್’ ಅಡಿಯಲ್ಲಿ ಆನ್​ಲೈನ್​ ವೆಬ್​ಸೈಟ್​ ಆರಂಭಿಸಿತ್ತು. ಆ ಮೂಲಕ ಪ್ರತಿ ವರ್ಷ 1 ರಿಂದ 1.25 ಲಕ್ಷ ಜನರು ಆನ್​ ಲೈನ್​​ ಮೂಲಕ ಸಂಘದ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.