ನವದೆಹಲಿ: ಇಂದು ಪುರಿ ಜಗನ್ನಾಥನ ರತ್ನ ಭಂಡಾರ ತೆರೆಕಂಡಿದೆ. ಮಧ್ಯಾಹ್ನ 1.28ಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಅಧಿಕಾರಿಗಳು ರಹಸ್ಯ ಕೊಠಡಿಯ ಬಾಗಿಲು ತೆರೆದರು.

ಪುರಿ ಜಗನ್ನಾಥ್ ದೇಗುಲದ ರತ್ನ ಭಂಡಾರ ಎಣಿಕೆ ಕುರಿತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದು, ‘ಮಹಾಪ್ರಭು ಜಗನ್ನಾಥರ ಒಡಿಯಾ ಐಡೆಂಟಿಟಿ.. ಸ್ವಾಭಿಮಾನ, ಸನಾತನ ಸಂಸ್ಕೃತಿ.. ಹಿಂದೂ ನಂಬಿಕೆಯ ಬಹುದೊಡ್ಡ ಪ್ರತೀಕ.

46 ವರ್ಷಗಳ ನಂತರ ಒಡಿಶಾ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಭರವಸೆ ಈಡೇರಿದೆ. ಮಹಾಪ್ರಭು ಜಗನ್ನಾಥ ರತ್ನ ಭಂಡಾರವನ್ನು ತೆರೆಯುವ ಮೂಲಕ ಹೊಸದಾಗಿ ಚುನಾಯಿತ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸಿದೆ ಎಂದಿದ್ದಾರೆ.

46 ವರ್ಷಗಳ ಹಿಂದೆ ಅಂದರೆ 1978ರಲ್ಲಿ ಕೊನೆಯ ಬಾರಿಗೆ ಈ ರಹಸ್ಯ ಕೊಠಡಿ ತೆರೆಯಲಾಗಿತ್ತು. ಇದೀಗ ಮತ್ತೆ ಪುರಿ ಜಗನ್ನಾಥ ಮಂದಿರದ ರತ್ನ ಭಂಡಾರವನ್ನು ತೆರೆಯಲಾಗಿದೆ. ಆದರೆ ಹಲವು ವರ್ಷಗಳಿಂದ ಅದರ ಕೀ ಕಾಣೆಯಾಗಿದೆ.

ನಕಲಿ ಕೀ ಬಳಸಿ ರತ್ನ ಭಂಡಾರ ತೆರೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪುರಿಯ ಜಗನ್ನಾಥ ದೇವಾಲಯದ ರತ್ನದ ಭಂಡಾರದಲ್ಲಿ ಸಂಗ್ರಹವಾಗಿರುವ ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳ ದಾಖಲೆಯನ್ನು ತಯಾರಿಸಲು ಒರಿಸ್ಸಾ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ವಿಶ್ವನಾಥ್ ರಥ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.

ಇನ್ನು ಇದರಲ್ಲಿ ಕೇರಳದ ಅನಂತ ಪದ್ಮನಾಭಸ್ವಾಮಿಯ ನೆಲಮಾಳಿಗೆಗಿಂತ ಹೆಚ್ಚು ನಿಧಿ ಇದೆ ಎಂದು ಅಂದಾಜಿಸಲಾಗಿದೆ. ಇವುಗಳ ಮೌಲ್ಯ ಲಕ್ಷ ಕೋಟಿ ಆಗುವ ನಿರೀಕ್ಷೆ ಇದೆ. ರಹಸ್ಯ ಕೋಣೆಯನ್ನು ಕೊನೆಯದಾಗಿ 1978 ರಲ್ಲಿ ತೆರೆಯಲಾಯಿತು. ಆ ದಿನ, 70 ದಿನಗಳು ಎಣಿಸಲಾಗಿದೆ. ಇದೀಗ ಮತ್ತೆ 46 ವರ್ಷಗಳ ನಂತರ ಈ ರಹಸ್ಯ ಕೊಠಡಿ ತೆರೆಯಲಾಗಿದೆ.