ನವದೆಹಲಿ: ಯೋಗ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಜೂ.20 ಹಾಗೂ 21ರಂದು ಕಾಶ್ಮೀರ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ನಂತರ ಜೂ.21ರಂದು ಮೋದಿ ಶ್ರೀನಗರದ ಶೇರ್‌-ಎ-ಕಾಶ್ಮೀರ್ ಅಂತರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ.

”ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬ ವಿಷಯದ ಅಡಿಯಲ್ಲಿ ಈ ವರ್ಷದ ಯೋಗ ದಿನವನ್ನು ಆಚರಿಸಲಾಗತ್ತಿದ್ದು,ಸ್ವಯಂನ ಆಂತರ್ಯ ಮತ್ತು ಬಾಹ್ಯ ಪ್ರಪಂಚದ ನಡುವಿನ ಸಂಬಂಧವನ್ನು ಉತ್ತೇಜಿಸುವುದು ಇದರ ಉದ್ದೇಶ ಎಂದು ಕೇಂದ್ರ ಆಯುಷ್‌ ಖಾತೆ ರಾಜ್ಯಸಚಿವ ಪ್ರತಾಪ್ ರಾವ್ ಜಾಧವ್ ಮಂಗಳವಾರ ಹೇಳಿದ್ದಾರೆ. ಈ ಮೂಲಕ ಗ್ರಾಮೀಣ ಭಾಗಗಳಲ್ಲಿಯು ಯತ್ತೇಜಿಸುವ ಪ್ರಯತ್ನ ಎನ್ನಲಾಗಿದೆ.

ಮನ್ ಕಿ ಬಾತ್ ಪುನಾರಂಭ

ಲೋಕಸಭೆ ಚುನಾವಣೆ ಕಾರಣ ನಿಂತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್‌ ಕೀ ಬಾತ್‌’ ರೇಡಿಯೋ ಕಾರ್ಯಕ್ರಮ ಜೂ.30ರಿಂದ ಪುನಾರಂಭ ಆಗಲಿದೆ. ಮಂಗಳವಾರ ಈ ವಿಷಯವನ್ನು ಟ್ವೀಟ್‌ನಲ್ಲಿ ಪ್ರಕಟಿಸಿರುವ ಮೋದಿ, ‘ಕಾರ್ಯಕ್ರಮದ ಬಗ್ಗೆ ಜನರು ತಮ್ಮ ವಿಚಾರಗಳನ್ನು ಮೈಗೌ ಓಪನ್ ಫೋರಂ, ನಮೋ ಆಪ್ ಅಥವಾ 1800 11 7800ಕ್ಕೆ ಸಂದೇಶ ಕಳಿಸಿ ಹಂಚಿಕೊಳ್ಳಬಹುದು’ ಎಂದು ಕೇಳಿಕೊಂಡಿದ್ದಾರೆ