ದೆಹಲಿ: ಪ್ರಧಾನಿ ಮೋದಿ ಅವರು ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಎಕ್ಸ್‌ನಲ್ಲಿ 100 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆ ಮೂಲಕ ವಿಶ್ವ ನಾಯಕರಾಗಿ ಮೋದಿ ಹೊರಹೊಮ್ಮಿದ್ದಾರೆ.
ದೇಶವನ್ನು ಮುನ್ನಡೆಸುವ ಜಗತ್ತಿನ ನಾಯಕರ ಪಟ್ಟಿಯಲ್ಲಿ ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋರ್ವಸ್ ಹೊಂದಿರುವ ನಾಯಕ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರವಾಗಿದ್ದಾರೆ. ವಿವಿಧ ಭಾರತೀಯ ರಾಜಕಾರಣಿಗಳ ಸಾಮಾಜಿಕ ಮಾಧ್ಯಮಗಳ ಫಾಲೋವರ್ಸ್ಗಳಿಗೆ ಹೋಲಿಸಿದಾಗ ಪ್ರಧಾನಿ ಮೋದಿ ಅವರು ಅತೀ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವುದು ಗಮನಾರ್ಹ ವಿಷಯವಾಗಿದೆ.

