ನವದೆಹಲಿ: ಪಿಂಚಣಿ ನಂಬಿಕೊಂಡು ಜೀವನ ಸಾಗಿಸುತ್ತಿರುವವರಿಗೆ ಸರ್ಕಾರ ಬಿಗ್​ ಶಾಕ್​ ಕೊಟ್ಟಿದೆ. ಎಂದಿನಂತೆ ಈ ವರ್ಷ ಕೂಡ ಪಿಂಚಣಿ ಪಡೆಯಲು ಸರ್ಟಿಫಿಕೇಟ್ ಸಲ್ಲಿಸುವುದು ಮುಖ್ಯ. ಒಂದು ವೇಳೆ ನೀವು ಆ ಸರ್ಟಿಫಿಕೇಟ್​​ ಸಲ್ಲಿಸದಿದ್ರೆ ಪಿಂಚಣಿ ರದ್ದು ಮಾಡುವ ಸಾಧ್ಯತೆ ಇದೆ.

ಈ ವರ್ಷ ಕೂಡ ಅಕ್ಟೋಬರ್​ನಿಂದಲೇ ಪಿಂಚಣಿ ಪಡೆಯೋಕೆ ಜೀವನ್ ಪ್ರಮಾಣ ಪತ್ರ ಸಲ್ಲಿಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಪಿಂಚಣಿದಾರರು ಈ ಸರ್ಟಿಫಿಕೇಟ್​ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.

2024ರ ಅಕ್ಟೋಬರ್ 1ನೇ ತಾರೀಕಿನಿಂದಲೇ ನೀವು ಲೈಫ್​​​ ಸರ್ಟಿಫಿಕೇಟ್​ ಸಲ್ಲಿಸಿದರೆ ಮುಂದಿನ ವರ್ಷ ನವೆಂಬರ್​​​ ತಿಂಗಳವರೆಗೆ ಚಾಲ್ತಿಯಲ್ಲಿ ಇರಲಿದೆ. ಮತ್ತೆ ಮುಂದಿನ ವರ್ಷ ಈ ದಾಖಲೆ ಸಲ್ಲಿಸಲೇಬೇಕು ಎಂಬುದು ರೂಲ್ಸ್​. ನಿವೃತ್ತಿ ನಂತರ ಸುಗಮವಾಗಿ ಜೀವನ ನಡೆಸೋ ಹಿರಿಯ ನಾಗರಿಕರಿಗೆ ಈ ಪಿಂಚಣೆ ಪ್ರಮುಖ ಆದಾಯ. 60 ರಿಂದ 80 ವರ್ಷ ವಯಸ್ಸಿನ ಎಲ್ಲರೂ ಮಾಸಿಕ ಪಿಂಚಣಿ ಪಡೆಯಲು ಜೀವನ್ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.

ಇನ್ನೂ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಆಧಾರ್ ಸಂಖ್ಯೆ, ಪಿಪಿಒ ಸಂಖ್ಯೆ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ನೀಡಬೇಕು. ಈ ದಾಖಲೆಗಳನ್ನು ನೀಡುವ ಮೂಲಕ ಲೈಫ್ ಸರ್ಟಿಫಿಕೆಟ್ ಸಲ್ಲಿಸಬಹುದು.