ನವದೆಹಲಿ: ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯಡಿ ಪ್ರಧಾನಿ ಮೋದಿ ಅವರು ಶುಕ್ರವಾರ ದೆಹಲಿಯಲ್ಲಿ ಸುಮಾರು 2,400 ಕೋಟಿ ರೂ. ಮೌಲ್ಯದ ಪ್ರೋತ್ಸಾಹ ಧನವನ್ನು ವಿತರಣೆ ಮಾಡಲಿದ್ದಾರೆ.
ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುವುದು, ಉದ್ಯೋಗಾವಕಾಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಈ ಯೋಜನೆಯಡಿ ಪ್ರಧಾನಿ ಮೋದಿ ನೀಡಲಿರುವ ಈ ಪ್ರೋತ್ಸಾಹ ಧನ ವಿತರಣೆಯು ಮಹತ್ವದ ಮೈಲಿಗಲ್ಲು ಎಂದು ಸರ್ಕಾರ ಹೇಳಿದೆ.
ಈ ಯೋಜನೆಯಡಿ ಮೊದಲ ಬಾರಿ ಉದ್ಯೋಗ ಪಡೆದವರು 15,000 ರೂ. ಪಡೆಯಲು ಅರ್ಹರಾಗಿರುತ್ತಾರೆ. ಹೆಚ್ಚುವರಿ ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಿಗೆ ಪ್ರತಿ ಉದ್ಯೋಗಿಗೆ ತಲಾ 3,000 ರೂ.ನಷ್ಟು ಪ್ರೋತ್ಸಾಹ ಧನ ದೊರೆಯಲಿದೆ.

