ನವದೆಹಲಿ: ದೇಶದೆಲ್ಲೆಡೆ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ ದಿನವನ್ನು ಆಚರಿಸಲಾಯಿತು.

ಸ್ವಾತಂತ್ರ್ಯ ದಿನವನ್ನುದ್ದೇಶಿಸಿ ಮಾತನಾಡಿದ ಮೋದಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು. ಈ ವೇಳೆ ಅವರ ಪೇಟ ಎಲ್ಲರ ಗಮನ ಸೆಳೆದಿದೆ. ಪ್ರತಿ ವರ್ಷವೂ ವೇಷಭೂಷಣಗಳಿಂದಲೇ ಗಮನ ಸೆಳೆಯುವ ನಮೋ, ಗುರುವಾರ ಕೆಂಪು ಕೋಟೆಯಲ್ಲಿ ರಾಜಸ್ಥಾನಿ ಲೆಹರಿಯಾ ಪ್ರಿಂಟ್‌ ಪೇಟಾ ಧರಿಸಿ ಗಮನ ಸೆಳೆದರು.

ಶಿರಸ್ತ್ರಾಣವು ಉದ್ದವಾದ ಬಾಲದೊಂದಿಗೆ ಕಿತ್ತಳೆ, ಹಳದಿ ಮತ್ತು ಹಸಿರು ಬಣ್ಣಗಳ ಮಿಶ್ರಣದಿಂದ ಕೂಡಿದ ಪೇಟ ಧರಿಸಿದ್ದರು. ಇದರೊಂದಿಗೆ ಬಿಳಿ ಕುರ್ತಾ, ತಿಳಿ ನೀಲಿ ಬಣ್ಣದ ಬಂಧಗಾಲಾ ಜಾಕೆಟ್ ಹೆಚ್ಚು ಗಮನ ಸೆಳೆಯಿತು. ಲೆಹರಿಯಾ, ಜವಳಿ ಟೈಡೈ ವಿನ್ಯಾಸವು ರಾಜಸ್ಥಾನದ ಸಾಂಪ್ರದಾಯಿಕ ವೈಭವಕ್ಕೆ ಮತ್ತೊಂದು ಹೆಸರಾಗಿದೆ.