ಚಂಡೀಗಢ: ಗೋಮಾಂಸ ಆರೋಪದ ಮೇಲೆ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ 7 ಮಂದಿಯನ್ನು ಬಂಧಿಸಲಾಗಿದೆ. ಆಗಸ್ಟ್ 27 ರಂದು ಹರಿಯಾಣದ ಚಾರ್ಖಿ ದಾದ್ರಿ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಆರೋಪಿಗಳು – ಅವರಲ್ಲಿ ಇಬ್ಬರು ಬಾಲಾಪರಾಧಿಗಳು ಎಂದು ಹೇಳಲಾಗಿದ್ದು, ಗೋರಕ್ಷಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
STORY | Cow vigilantes lynch migrant worker in Haryana, 5 held
READ: https://t.co/lsvvaDAUTj
VIDEO:
(Full video available on PTI Videos – https://t.co/n147TvqRQz) pic.twitter.com/FJLkHAUBgO
— Press Trust of India (@PTI_News) August 31, 2024
ಮಾಹಿತಿಯ ಪ್ರಕಾರ, ಆಗಸ್ಟ್ 27 ರಂದು ಹರಿಯಾಣದ ಚಾರ್ಖಿ ದಾದ್ರಿ ಜಿಲ್ಲೆಯಲ್ಲಿ 22 ವರ್ಷದ ಸಬೀರ್ ಮಲಿಕ್ ಅವರನ್ನು ಥಳಿಸಿ ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ. ಅವರು ಚಿಂದಿ ಆಯುವವರಾಗಿ ರಾಜ್ಯಕ್ಕೆ ಬಂದಿದ್ದರು ಮತ್ತು ಕಳೆದ ಐದು ವರ್ಷಗಳಿಂದ ತಮ್ಮ ಪತ್ನಿ ಮತ್ತು ಎರಡು ವರ್ಷದ ಮಗಳೊಂದಿಗೆ ಹನ್ಸಾವಾಸ್ ಖುರ್ದ್ ಗ್ರಾಮದಲ್ಲಿ ವಾಸಿಸುತ್ತಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಆರೋಪಿಗಳನ್ನು ಅಭಿಷೇಕ್, ಮೋಹಿತ್, ಕಮಲ್ಜಿತ್, ಸಾಹಿಲ್ ಮತ್ತು ರವೀಂದರ್ ಎಂದು ಗುರುತಿಸಲಾಗಿದೆ. ಗೋಮಾಂಸ ಸೇವಿಸುತ್ತಿದ್ದಾರೆ ಎಂದು ಆರೋಪಿಸಿ ಆಗಸ್ಟ್ 27 ರಂದು ಯುವಕರ ಗುಂಪು ಈ ಗ್ರಾಮದಲ್ಲಿ ಕೆಲವು ಚಿಂದಿ ಆಯುವವರನ್ನು ಹಿಡಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ಅಲ್ಲಿನ ಕಚ್ಚಾ ಗುಡಿಸಲುಗಳಲ್ಲಿ ಕೆಲವು ವ್ಯಕ್ತಿಗಳು ಮಾಂಸವನ್ನು ಬೇಯಿಸುತ್ತಿರುವುದನ್ನು ನೋಡಿದರೂ, ಅದು ಗೋಮಾಂಸವೇ ಎಂದು ಪರೀಕ್ಷಿಸಲು ವಿಧಿವಿಜ್ಞಾನ ಮತ್ತು ಪಶುವೈದ್ಯ ತಜ್ಞರನ್ನು ಕರೆಸಲಾಯಿತು. ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

