ಲಕ್ನೋ: ಬಹುಜನ ಸಮಾಜ ಪಾರ್ಟಿ ಯ ರಾಷ್ಟ್ರೀಯ ಅಧ್ಯಕ್ಷರಾಗಿ ಹಿರಿಯ ನಾಯಕಿ ಮಾಯಾವತಿ ಮರು ಆಯ್ಕೆಯಾಗಿದ್ದಾರೆ. ಬಿಎಸ್‌ಪಿ ಕೇಂದ್ರ ಕಾರ್ಯಕಾರಿ ಸಮಿತಿ , ರಾಷ್ಟ್ರೀಯ ಮಟ್ಟದ ಹಿರಿಯ ಪದಾಧಿಕಾರಿಗಳು, ರಾಜ್ಯ ಪಕ್ಷದ ಘಟಕಗಳು ಮತ್ತು ದೇಶಾದ್ಯಂತ ಆಯ್ಕೆಯಾದ ಪ್ರತಿನಿಧಿಗಳ ವಿಶೇಷ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
68 ವರ್ಷದ ಮಾಯಾವತಿ ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್ ಎರಡು ದಶಕಗಳ ಹಿಂದೆ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದರು.

