ಮುಂಬೈ : ಬಾಡಿ ಬಿಲ್ಡರ್ ಮಯಾಂಕ್ ಪವಾರ್ (37) ಹಠಾತ್ ಮೃತಪಟ್ಟಿದ್ದಾರೆ. ಸ್ಪ್ಲಿಟ್ಸ್‌ವಿಲ್ಲಾ 7ನೇ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ಮೂಲಕ ಪವಾರ್ ಭಾರಿ ಜನಪ್ರಿಯತೆ ಪಡೆದಿದ್ದರು.

7 ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಗೆದ್ದ ಮಯಾಂಕ್ ಪವಾರ್ ನಿಧನ ಹಲವರಿಗೆ ಆಘಾತ ತಂದಿದೆ. ಕುಟುಂಬಸ್ಥರು ಮಯಾಂಕ್ ಪವಾರ್ ನಿಧನದ ಸುದ್ದಿಯನ್ನು ಖಾತ್ರಿಪಡಿಸಿದ್ದಾರೆ.

ಮಯಾಂಕ್ ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಕುಟುಂಬದವರು ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರಾದರೂ, ಹೆಚ್ಚಿನ ವಿವರಗಳನ್ನು ನೀಡಿಲ್ಲ. ಇತ್ತೀಚೆಗಷ್ಟೇ ಅಂದರೆ ಜನವರಿ 1ರಂದು ಅವರು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಸ್ಪಿಟ್ಟಿಲ್ಲಾ ಶೋನಲ್ಲಿದ್ದಾಗ ಸನ್ನಿ ಲಿಯೋನ್ ಮತ್ತು ನಿಖಿಲ್ ಚಿನ್ನಪ್ಪ ಅವರಂತಹ ತಾರೆಯರ ಮೆಚ್ಚುಗೆಗೆ ಅವರು ಸಹ ಪಾತ್ರರಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.